
ನವದೆಹಲಿ , 6ನವೆಂಬರ್ (ಹಿ.ಸ):
ಆ್ಯಂಕರ್ :ಸಮೃದ್ಧಿಗಾಗಿ ಎಲ್ಲರನ್ನೊಳಗೊಂಡ ವ್ಯಾಪಾರ ಎಂಬ ವಿಷಯಾಧಾರಿತ ಶಿಬಿರವನ್ನು ನೀತಿ ಆಯೋಗ ನವದೆಹಲಿಯಲ್ಲಿ ಇಂದು ಆಯೋಜಿಸಿದೆ. ಜಿ-೨೦ ನವದೆಹಲಿ ನಾಯಕರ ಘೋಷಣೆಯಲ್ಲಿ ವಿವರಿಸಿದಂತೆ ೧೦ ವಿವಿಧ ವಿಷಯಾಧಾರಿತ ಶಿಬಿರದ ಭಾಗವಾಗಿ ಇಂದು ಈ ಕಾರ್ಯಕ್ರಮ ಆಯೋಜನೆಯಾಗಿದೆ. ವಿವಿಧ ವಿಷಯಗಳ ತಜ್ಞರು, ಚಿಂತಕರ ಪ್ರತಿನಿಧಿಗಳು, ಶೈಕ್ಷಣಿಕ ತಜ್ಞರು ಮತ್ತು ಇತರ ಸಂಬಂಧಿತರು ಚರ್ಚಿಸಲು ಇದು ವೇದಿಕೆ ಒದಗಿಸಿದೆ. ಪ್ರಗತಿಗಾಗಿ ಒಳಗೊಳ್ಳುವಿಕೆ ಪ್ರೋತ್ಸಾಹಿಸುವುದು ಮತ್ತು ಜಾಗತಿಕ ಮೌಲ್ಯ ಸರಪಳಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಶಿಬಿರದಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಗತಿಗೆ ಚುರುಕು ನೀಡುವ ಬಗ್ಗೆ ಕೂಡ ನೀತಿ ಆಯೋಗ ಶಿಬಿರ ಆಯೋಜಿಸಲಿದೆ. ಮಾನವ ಅಭಿವೃದ್ಧಿ ಸಂಸ್ಥೆ ಮತ್ತು ಸಾಮಾಜಿಕ-ಆರ್ಥಿಕ ಪ್ರಗತಿ ಕೇಂದ್ರದ ಸಹಯೋಗದಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ಈ ಗುರಿಗಳ ಸಾಧನೆಗೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಅವುಗಳ ಅನುಷ್ಠಾನದ ಬಗ್ಗೆ ಚರ್ಚೆ ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್
