ಬಳ್ಳಾರಿ, 12 ಜನವರಿ(ಹಿ.ಸ):
ಆ್ಯಂಕರ್ :
ಜೆ.ಎಸ್.ಡಬ್ಲ್ಯೂ ಸಮೂಹ ಸಂಸ್ಥೆಯು, ಭಾರತದ ಪ್ರಮುಖ ಮತ್ತು ವೇಗವಾಗಿ ವಿಸ್ತರಿಸುತ್ತಿರುವ ಯು ಎಸ್ ಡಾಲರ್ ೨೩ ಶತಕೋಟಿ ವೈವಿಧ್ಯಮಯ ವ್ಯಾಪಾರ ವಹಿವಾಟು ಹೊಂದಿದೆ. ಇದು ಫಿನ್ಲ್ಯಾಂಡ್ ನ ಪರಿವರ್ತನಾ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಕಂಪನಿಯಾದ ಕೂಲ್ಬ್ರೂಕ್ಸಂಸ್ಥೆಯೊಂದಿಗೆ ಕಾರ್ಯತಂತ್ರದ ಸಹಕಾರ ಒಪ್ಪಂದವನ್ನು ಮಾಡಿಕೊಳ್ಳುತ್ತಿದೆ. ಈ ಕಾರ್ಯತಂತ್ರದ ಪಾಲುದಾರಿಕೆಯು ಉಕ್ಕು ಮತ್ತು ಸಿಮೆಂಟ್ ಉತ್ಪಾದನೆಯಲ್ಲಿ ಕಡಿಮೆ- ಇಂಗಾಲದ ಡೈಆಕ್ಸೈಡ್ (CO2) ಹೊರಸೂಸುವಿಕೆಯನ್ನು ಸಾಧಿಸುವ ಪ್ರಾಥಮಿಕ ಗುರಿಯೊಂದಿಗೆ, ಕರ್ನಾಟಕದ ತೋರಣಗಲ್ ನಲ್ಲಿರುವ ಜೆ.ಎಸ್.ಡಬ್ಲ್ಯೂ ವಿಜಯನಗರ ವರ್ಕ್ಸ್ನ ಉತ್ಪಾದನಾ ತಾಣಗಳಲ್ಲಿ ಕೂಲ್ಬ್ರೂಕ್ನ ರೋಟೊಡೈನಾಮಿಕ್ ಹೀಟರ್ (RDH™) ತಂತ್ರಜ್ಞಾನವನ್ನು ಅನುಷ್ಠಾನಗೊಳಿಸುವುದರ ಮೇಲೆ ಗಮನ ಹರಿಸುತ್ತಿದೆ.
೨೦೨೩ ರಲ್ಲಿ ನೆದರ್ಲ್ಯಾಂಡ್ಸ್ನ ಬ್ರೈಟ್ಲ್ಯಾಂಡ್ಸ್ ಕೆಮೆಲೋಟ್ ಕ್ಯಾಂಪಸ್ನಲ್ಲಿ, ಕೂಲ್ಬ್ರೂಕ್ ಮೊದಲ ಹಂತದ ದೊಡ್ಡ ಪ್ರಮಾಣದ ಪ್ರಯೋಗಗಳು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಜೆ.ಎಸ್.ಡಬ್ಲ್ಯೂ. ಗ್ರೂಪ್ ಒಪಂದಕ್ಕೆ ಮುಂದಾಳತ್ವ ನಡೆಸಿದೆ, ರೋಟೊಡೈನಾಮಿಕ್ ಹೀಟರ್ (RDH™) ಪ್ರಯೋಗಗಳು ತಂತ್ರಜ್ಞಾನದ ಶಾಖ-ಉತ್ಪಾದಿಸುವ ಸಾಮರ್ಥ್ಯಗಳನ್ನು ಪ್ರದರ್ಶಿಸಿದ, ಸಾಂಪ್ರದಾಯಿಕ ಪ್ರತಿರೋಧಕ ಹೀಟರ್ಗಳ ವ್ಯಾಪ್ತಿಯನ್ನು ಮೀರಿ ೧೦೦೦ ಡಿಗ್ರಿ ಸೆಲ್ಸಿಯಸ್ವರೆಗೆ ಮೀರಿಸುತ್ತದೆ ಮತ್ತು ೧೭೦೦ ಡಿಗ್ರಿ ಸೆಲ್ಸಿಯಸ್ವರೆಗೆ ಅದರ ತಾಂತ್ರಿಕವಾಗಿ ಸಂಭಾವ್ಯ ಮಾರ್ಗವನ್ನು ಮೌಲ್ಯೀಕರಿಸುತ್ತದೆ – ಉಕ್ಕಿನ ಉತ್ಪಾದನೆಯಲ್ಲಿ ಅಗತ್ಯವಾದ ಹೆಚ್ಚಿನ ತಾಪಮಾನಕ್ಕೆ ಇದು ಅವಶ್ಯಕವಾಗಿದೆ.
ಜಂಟಿ ಉಪಕ್ರಮವು ವಿಜಯನಗರ ವರ್ಕ್ಸ್ನಲ್ಲಿ ರೋಟೊಡೈನಾಮಿಕ್ ಹೀಟರ್ (RDH™) ತಂತ್ರಜ್ಞಾನವನ್ನು ಪ್ರದರ್ಶಿಸುವ ವಾಣಿಜ್ಯ ಪ್ರದರ್ಶನ, ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆಯನ್ನು ಒಳಗೊಂಡಿದೆ. ಒಪ್ಪಂದದ ಭಾಗವಾಗಿ, ಎರಡೂ ಕಂಪನಿಗಳ ಸಹಭಾಗಿತ್ವದಲ್ಲಿ ಕಡಿಮೆ ಇಂಗಾಲದ ಉತ್ಪಾದನೆಯನ್ನು ಸಾಧಿಸುವ ಗುರಿಯನ್ನು ಹೊಂದಿರುವ ಮಾರ್ಗಸೂಚಿಯನ್ನು ರೂಪಿಸುತ್ತವೆ, ಜೆ.ಎಸ್.ಡಬ್ಲ್ಯೂ ಸ್ಟೀಲ್ ಮತ್ತು ಸಿಮೆಂಟ್ ಉತ್ಪಾದನಾ ಪ್ರಕ್ರಿಯೆಗಳ ರೋಟೊಡೈನಾಮಿಕ್ ಹೀಟರ್(RDH™) ತಂತ್ರಜ್ಞಾನದ ಹಂತ ಹಂತದ ಕಾರ್ಯಪ್ರಕ್ರಿಯೆಗಳನ್ನು ಸುಗಮಗೊಳಿಸುತ್ತದೆ.
ಜೆ.ಎಸ್.ಡಬ್ಲ್ಯೂ ಸಂಸ್ಥೆಯ ಪರವಾಗಿ ಒಪ್ಪಂದಕ್ಕೆ ಸಹಿ ಹಾಕಿದ ಶ್ರೀ ಪಿ.ಕೆ.ಮುರುಗನ್, ಅಧ್ಯಕ್ಷರು– ಜೆ.ಎಸ್.ಡಬ್ಲ್ಯೂ ಸ್ಟೀಲ್ ವಿಜಯನಗರ ಮತ್ತು ಸೇಲಂ ವರ್ಕ್ಸ್, ಅವರು ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ- “ಜೆ.ಎಸ್.ಡಬ್ಲ್ಯೂ. ಗ್ರೂಪ್ ತನ್ನ ನಿರ್ದಿಷ್ಟ ಇಂಗಾಲದ ಡೈಆಕ್ಸೈಡ್(CO2) ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮಹತ್ವಾಕಾಂಕ್ಷೆಯ ಸುಸ್ಥಿರತೆಯ ಗುರಿಗಳನ್ನು ಹೊಂದಿದ್ದು, ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯ ಸುಸ್ಥಿರ ಅಭಿವೃದ್ಧಿ ಸನ್ನಿವೇಶ ಘಟಕದೊಂದಿಗೆ ಮತ್ತು ಭಾರತದ ರಾಷ್ಟ್ರೀಯ ನಿರ್ಧಾರಿತ ಕೊಡುಗೆಯ ಘಟಕದೊಂದಿಗೆ ಹೊಂದಿಕೊಂಡಿದೆ. ರೋಟೊಡೈನಾಮಿಕ್ ಹೀಟರ್ (RDH™) ತಂತ್ರಜ್ಞಾನದ ನಿಯೋಜನೆಯು ಸಮೂಹದ ಉತ್ಪಾದನಾ ಪ್ರಕ್ರಿಯೆಯ ಡಿಕಾರ್ಬೊನೈಸೇಶನ್ ಮೇಲೆ ಗಮನಾರ್ಹ ಪರಿಣಾಮ ಬೀರುವ ನಿರೀಕ್ಷೆಯಿದೆ. ಇಂಗಾಲದ ಡೈಆಕ್ಸೈಡ್(CO2) ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ನಮ್ಮ ಹವಾಮಾನ ಗುರಿಗಳನ್ನು ಸಾಧಿಸಲು ನಮ್ಮ ಪ್ರಯಾಣದಲ್ಲಿ ಪಾಲುದಾರರಾಗಿ ಕೂಲ್ಬ್ರೂಕ್ ಸಂಸ್ಥೆಯ ತಂತ್ರಜ್ಙಾನವನ್ನು ಕಾರ್ಯತಗೊಳಿಸಲು ಸಂತೋಷಪಡುತ್ತೇವೆ.” ಎಂದು ತಿಳಿಸಿದರು.
ಹಾಗೆಯೇ ಕೂಲ್ಬ್ರೂಕ್ ಸಂಸ್ಥೆಯ ಸಿಇಒ ಶ್ರೀ ಜೂನಸ್ ರೌರಮೊ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತ – “ಕೂಲ್ಬ್ರೂಕ್ನ ಪ್ರಾಯೋಗಿಕ ಪರೀಕ್ಷಾ ಫಲಿತಾಂಶಗಳು ನಮ್ಮ ತಂತ್ರಜ್ಞಾನದ ಸಾಮರ್ಥ್ಯಗಳನ್ನು ಈಗಾಗಲೇ ಸಾಬೀತುಪಡಿಸಿವೆ ಮತ್ತು ಜೆ.ಎಸ್.ಡಬ್ಲ್ಯೂ ಸ್ಟೀಲ್ನ ಉತ್ಪಾದನೆಯಲ್ಲಿ ರೋಟೊಡೈನಾಮಿಕ್ ಹೀಟರ್ ತಂತ್ರಜ್ಞಾನದ ನಿಯೋಜನೆಯು ಉಕ್ಕಿನ ಉತ್ಪಾದನಾ ಪ್ರಕ್ರಿಯೆಗಳಲ್ಲಿ ಶುದ್ಧ ಶಕ್ತಿಯೊಂದಿಗೆ ವಿದ್ಯುದ್ದೀಕರಣದ ಪರಿಣಾಮವನ್ನು ಪ್ರದರ್ಶಿಸುತ್ತದೆ. ನಮ್ಮ ಪೇಟೆಂಟ್ ಪಡೆದ, ವಿದ್ಯುತ್ ತಂತ್ರಜ್ಞಾನವು ಇಂಧನಗಳನ್ನು ಸುಡುವ ಅಗತ್ಯವನ್ನು ಕಡಿಮೆ ಮಾಡುವ ಮೂಲಕ ಉಕ್ಕಿನ ಉತ್ಪಾದನೆಯಲ್ಲಿ ಗಮನಾರ್ಹವಾದ ಡಿಕಾರ್ಬೊನೈಸೇಶನ್ ನ್ನು ಸಕ್ರಿಯಗೊಳಿಸುತ್ತದೆ. ನವೀನ ಮಾದರಿಯ ಸ್ವಚ್ಛ ಔದ್ಯೋಗಿಕ ಯುಗವನ್ನು ಸಶಕ್ತಗೊಳಿಸುವ ಕೂಲ್ಬ್ರೂಕ್ನ ಕ್ರಾಂತಿಕಾರಿ ತಂತ್ರಜ್ಞಾನದ ಅನುಷ್ಠಾನವನ್ನು ಪ್ರಾರಂಭಿಸಲು, ಉಕ್ಕಿನ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ನಮ್ಮ ಪಾಲುದಾರ ನೆಟ್ವರ್ಕ್ಗೆ ಜೆ.ಎಸ್.ಡಬ್ಲ್ಯೂ ಸ್ಟೀಲ್ ಸಂಸ್ಥೆಯನ್ನು ಸ್ವಾಗತಿಸಲು ನಾವು ಸಂತೋಷಪಡುತ್ತೇವೆ” ಎಂದು ತಿಳಿಸಿದರು.
ರೋಟೊಡೈನಾಮಿಕ್ ಹೀಟರ್ (RDH™) ತಂತ್ರಜ್ಞಾನವು ಉಕ್ಕು ಮತ್ತು ಸಿಮೆಂಟ್ ಉತ್ಪಾದನೆಯಲ್ಲಿ ಉನ್ನತ-ತಾಪಮಾನದ ಕೈಗಾರಿಕಾ ಪ್ರಕ್ರಿಯೆಗಳಿಗೆ ಶಕ್ತಿ ತುಂಬಲು ನವೀಕರಿಸಬಹುದಾದ ವಿದ್ಯುಚ್ಛಕ್ತಿಯನ್ನು ಬಳಸಿಕೊಳ್ಳುತ್ತದೆ, ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯಲ್ಲಿ ಭರವಸೆಯ ಕಡಿತವನ್ನು ನೀಡುತ್ತದೆ, ನಿರ್ದಿಷ್ಟವಾಗಿ ಉಕ್ಕು ಉತ್ಪಾದನಾ ಕೈಗಾರಿಕೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಬ್ಲಾಸ್ಟ್ ಫರ್ನೇಸ್ ಮತ್ತು ಡೈರೆಕ್ಟ್ ರೆಡ್ಯೂಸ್ಡ್ ಐರನ್(DRI) ಉಕ್ಕು ಉತ್ಪಾದನಾ ಪ್ರಕ್ರಿಯೆಗಳಲ್ಲಿ ಡಿಕಾರ್ಬೊನೈಸೇಶನ್ ನಿಯಂತ್ರಣಕಾಗಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತೆ. ಈ ಸಹಯೋಗವು ಜೆ.ಎಸ್.ಡಬ್ಲ್ಯೂ. ಸ್ಟೀಲ್ ಬೆಂಬಲಿಸುತ್ತದೆ, ಡಿಕಾರ್ಬೊನೈಸೇಶನ್ ಅನ್ನು ವೇಗಗೊಳಿಸುವ ಬದ್ಧತೆ ಹಾಗೂ ಕಂಪನಿಯ ನಿವ್ವಳ ನಿಸ್ವಾರ್ಥ ಆಕಾಂಕ್ಷೆಗಳನ್ನು ಸಾಧಿಸುವುದು ಪ್ರಮುಖ ದ್ಯೇಯವಾಗಿರುತ್ತದೆ.
ಕೂಲ್ಬ್ರೂಕ್ನ ರೋಟೊಡೈನಾಮಿಕ್ ಹೀಟರ್ (RDH™) ತಂತ್ರಜ್ಞಾನ ಬಳಕೆಯು ಇಂಧನಗಳ ದಹನವನ್ನು ನವೀಕರಿಸಬಹುದಾದ ಶಕ್ತಿಯಿಂದ ನಡೆಸಲ್ಪಡುವ ವಿದ್ಯುದ್ದೀಕರಣದೊಂದಿಗೆ ಬದಲಿಸುವ ಮೂಲಕ, ಬೃಹತ್ ಕೈಗಾರಿಕೆಗಳ ಜಾಗತಿಕ ಮಟ್ಟದಲ್ಲಿ ಇಂಗಾಲದ ಡೈಆಕ್ಸೈಡ್(CO2) ಹೊರಸೂಸುವಿಕೆಯನ್ನು ಶೆ. ೩೦% ರಷ್ಟು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ತಂತ್ರಜ್ಞಾನವು ಎರಡು ಪ್ರಮುಖ ಅನ್ವಯಿಕೆಗಳನ್ನು ಹೊಂದಿದೆ: ಸಿಮೆಂಟ್, ಉಕ್ಕು ಮತ್ತು ಕಬ್ಬಿಣ ಮತ್ತು ರಾಸಾಯನಿಕಗಳ ಉತ್ಪಾದನೆಯಲ್ಲಿ ಹೆಚ್ಚಿನ-ತಾಪಮಾನದ ಪ್ರಕ್ರಿಯೆಯ ತಾಪನವನ್ನು ವಿದ್ಯುದೀಕರಿಸುವುದು ಮತ್ತು ಡಿಕಾರ್ಬನೈಸ್ ಮಾಡುವುದು, ಅಲ್ಲದೇ ೧೦೦% ಇಂಗಾಲದ ಡೈಆಕ್ಸೈಡ್(CO2) ಮುಕ್ತ ಓಲೆಫಿನ್ ಉತ್ಪಾದನೆಯನ್ನು ತಲುಪಲು ಪೆಟ್ರೋಕೆಮಿಕಲ್ ಉದ್ಯಮದಲ್ಲಿ ಪಳೆಯುಳಿಕೆ-ಇಂಧನ ಉಗಿ ಕ್ರ್ಯಾಕರ್ಗಳನ್ನು ಬದಲಾಯಿಸುವುದು.ಎರಡೂ ತಂತ್ರಜ್ಞಾನಗಳನ್ನು ೨೦೨೩ ರಲ್ಲಿ ಕೂಲ್ಬ್ರೂಕ್ನ ದೊಡ್ಡ-ಪ್ರಮಾಣದ ಪೈಲಟ್ ಪ್ಲಾಂಟ್ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಮತ್ತು ೨೦೨೪ ರಿಂದ ಪ್ರಾರಂಭವಾಗುವ ವಾಣಿಜ್ಯ ಬಿಡುಗಡೆಯ ಹಾದಿಯಲ್ಲಿದೆ.
ಹಿಂದೂಸ್ತಾನ್ ಸಮಾಚಾರ್
