ಕೊಲ್ಕೋತ್ತಾ, 8 ಜನವರಿ(ಹಿ.ಸ):
ಆ್ಯಂಕರ್ :
ಕೊಲ್ಕೋತ್ತಾದಲ್ಲಿ ನಡೆಯಲಿರುವ ಒಳನಾಡು ಜಲಮಾರ್ಗ ಅಭಿವೃದ್ಧಿ ಮಂಡಳಿಯ ಮೊದಲ ಸಭೆಯ ನೇತೃತ್ವವನ್ನು ಕೇಂದ್ರ ಬಂದರು, ನೌಕೆ ಮತ್ತು ಜಲ ಮಾರ್ಗಗಳ ಖಾತೆ ಸಚಿವ ಸರ್ಬಾನಂದ್ ಸೋನೊವಾಲ್ ವಹಿಸಲಿದ್ದಾರೆ. ಸಭೆಯಲ್ಲಿ ಅವರು, ಹರಿತ್ ನೌಕಾ – ಒಳನಾಡು ಹಡಗುಗಳ ಸಂಚಾರಕ್ಕೆ ಪರಿಸರ ಸ್ನೇಹಿ ಮಾರ್ಗಸೂಚಿ ಮತ್ತು ನದಿ ನೌಕೆ ಪ್ರವಾಸೋದ್ಯಮ ಮಾರ್ಗಸೂಚಿ ೨೦೪೭ ಸೇರಿ ವಿವಿಧ ಪ್ರಮುಖ ಉಪಕ್ರಮಗಳನ್ನು ಅನಾವರಣಗೊಳಿಸಲಿದ್ದಾರೆ. ಒಳನಾಡು ಜಲಸಾರಿಗೆಯಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತು ಸರಕು ಸಾಗಾಣೆ ಪ್ರಮಾಣ ಪ್ರಸ್ತುತ ಶೇಕಡ ೨ರಷ್ಟಿದ್ದು, ಈ ಪ್ರಮಾಣವನ್ನು ಶೇಕಡ ೫ಕ್ಕೆ ಹೆಚ್ಚಿಸಲು ಸಚಿವಾಲಯ ಗುರಿ ನಿಗದಿಪಡಿಸಿಕೊಂಡಿದೆ. ಸುಧಾರಿತ ಸರಕು-ಸಾಗಾಣೆ ಸಾಮರ್ಥ್ಯ ಪ್ರಯಾಣಿಕರ ಸಂಚಾರ ಮತ್ತು ಪ್ರವಾಸೋದ್ಯಮ ಬಲವರ್ಧನೆಗೆ ಒತ್ತು ನೀಡಲು ಸರ್ಕಾರ ಕಳೆದ ವರ್ಷದ ಅಕ್ಟೋಬರ್ನಲ್ಲಿ ಒಳನಾಡು ಜಲಮಾರ್ಗಗಳ ಅಭಿವೃದ್ಧಿ ಮಂಡಳಿ ಸ್ಥಾಪಿಸಿತ್ತು.
ಹಿಂದೂಸ್ತಾನ್ ಸಮಾಚಾರ್
