ಉತ್ತರಕಾಶಿ, 23 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಉತ್ತರಾಖಂಡದ ಪ್ರಸಿದ್ಧ ಚಾರ್ ಧಾಮ ಯಾತ್ರೆಯ ಮೊದಲ ಪವಿತ್ರ ತೀರ್ಥಕ್ಷೇತ್ರವಾದ ಯಮುನೋತ್ರಿ ಧಾಮದಲ್ಲಿ ಇಂದು ಭಯ್ಯಾ ದೂಜ್ ಪರ್ವದಂದು ತಾಯಿ ಯಮುನಾ ದೇವಿಯ ವಿದಾಯ ಸಂಭ್ರಮ ನಡೆಯುತ್ತಿದೆ. ಮಧ್ಯಾಹ್ನ 12.30ಕ್ಕೆ ಚಳಿಗಾಲದ ಅವಧಿಗೆ ದೇವಾಲಯದ ಬಾಗಿಲುಗಳನ್ನು ವಿಧಿವಿಧಾನಗಳೊಂದಿಗೆ ಮುಚ್ಚಲಾಗುತ್ತದೆ.
ಬೆಳಿಗ್ಗೆಯಿಂದಲೇ ಧಾಮದಲ್ಲಿ ವೇದ ಪಠಣ, ವಿಶೇಷ ಪೂಜೆ ಹಾಗೂ ಭಕ್ತರ ಜಯ ಘೋಷದ ನಡುವೆ ವಿದಾಯ ಸಂಭ್ರಮ ನಡೆಯುತ್ತಿದೆ. ತಾಯಿ ಯಮುನಾ ದೇವಿಯ ಸಹೋದರರಾದ ಶನಿದೇವ ಮಹಾರಾಜರ ಪಲ್ಲಕ್ಕಿ, ತಮ್ಮ ಸಹೋದರಿಯನ್ನು ಕರೆದುಕೊಂಡು ಹೋಗಲು ಇಂದು ಬೆಳಿಗ್ಗೆ ಖರ್ಶಾಲಿ ಗ್ರಾಮದಿಂದ ಯಮುನೋತ್ರಿ ಧಾಮಕ್ಕೆ ಪ್ರಯಾಣ ಬೆಳೆಸಿದೆ ಎಂದು ದೇವಾಲಯ ಸಮಿತಿಯ ವಕ್ತಾರ ಪುರುಷೋತ್ತಮ ಉನಿಯಾಲ್ ತಿಳಿಸಿದ್ದಾರೆ.
ದೇವಾಲಯದ ಬಾಗಿಲು ಮುಚ್ಚಿದ ನಂತರ, ತಾಯಿ ಯಮುನಾ ಅವರ ಪವಿತ್ರ ಪಲ್ಲಕ್ಕಿಯು ಭಜನೆಗಳು ಮತ್ತು ವಾದ್ಯಗೋಷ್ಠಿಯ ನಾದದ ನಡುವೆ ಖರ್ಶಾಲಿ ಗ್ರಾಮ ತಲುಪಲಿದ್ದು, ಅಲ್ಲಿ ಚಳಿಗಾಲದ ಅವಧಿಯಲ್ಲಿ ಪೂಜಾ ವಿಧಿಗಳು ನೆರವೇರಿಸಲ್ಪಡುವವು. ಯಮುನಾ ಮಾತೆಯ ಈ ವಿದಾಯವನ್ನು ಮಗಳು ತಾಯಿಯ ಮನೆಗೆ ವಾಪಸ್ಸು ಎನ್ನುವ ಪರಂಪರೆಯ ಭಾವನಾತ್ಮಕ ರೂಪಕದ ಮೂಲಕ ಆಚರಿಸಲಾಗುತ್ತದೆ.
ಯಮುನೋತ್ರಿ ಧಾಮದ ಈ ಸಂಪ್ರದಾಯವು ಪ್ರತಿವರ್ಷ ಚಾರ್ ಧಾಮ ಯಾತ್ರೆಯ ಮುಕ್ತಾಯದ ಸಂಕೇತವಾಗಿದ್ದು, ಸಾವಿರಾರು ಭಕ್ತರು ಈ ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಳ್ಳುತ್ತಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
