ಬೆಂಗಳೂರು, 22 ಆಗಸ್ಟ್ (ಹಿ.ಸ.) :
ಆ್ಯಂಕರ್ : ವಿಧಾನ ಸಭೆಯಲ್ಲಿ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಧರ್ಮಸ್ಥಳ ತನಿಖೆಯನ್ನು ಈಗ ಬಿಜೆಪಿ ರಾಜಕೀಯವಾಗಿಸಿದೆ. ಆದರೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರೇ ತನಿಖೆಗೆ ಸ್ವಾಗತ ಮಾಡಿದ್ದಾರೆ ಎಂದರು.
ಎಸ್‌ಐಟಿ ರಚನೆ ಮಾಡಿದಾಗ ಬಿಜೆಪಿ ಮೌನವಾಗಿತ್ತು. 15 ಜಾಗಗಳನ್ನು ಅಗೆದಾಗ ಕೇವಲ ಎರಡು ಕಡೆ ಮಾತ್ರ ಅಸ್ಥಿಪಂಜರ ಪತ್ತೆಯಾಗಿದೆ. 13 ಕಡೆ ಏನೂ ಸಿಕ್ಕಿಲ್ಲ. ಆಗಲೇ ಬಿಜೆಪಿ ಮಾತಾಡಲು ಶುರು ಮಾಡಿದೆ ಎಂದು ಮುಖ್ಯಮಂತ್ರಿ ಟೀಕಿಸಿದ್ದಾರೆ.
ಇದರೊಂದಿಗೆ, ಈ ಪ್ರಕರಣದಲ್ಲಿ ತನಿಖೆಯ ಪ್ರಗತಿ ಮತ್ತು ಅಸ್ಥಿಪಂಜರಗಳ ಬಗ್ಗೆ ಮೊದಲ ಬಾರಿಗೆ ಅಧಿಕೃತ ವಿವರವನ್ನು ಮುಖ್ಯಮಂತ್ರಿ ನೀಡಿದರು. ಆದರೆ ತನಿಖೆಯ ಪೂರ್ಣ ಸಾರಾಂಶ ಅಥವಾ ಮುಂದಿನ ಕ್ರಮಗಳ ಬಗ್ಗೆ ಯಾವುದೇ ಸ್ಪಷ್ಟನೆ ನೀಡಲಿಲ್ಲ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
