ಪಾಟ್ನಾ, 21 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 22ರಂದು ಬೇಗುಸರಾಯ್‌ನಲ್ಲಿ ಗಂಗಾ ನದಿಯ ಮೇಲೆ ನಿರ್ಮಿಸಲಾದ ಆಂಟಾ-ಸಿಮಾರಿಯಾ ಆರು ಪಥದ ಸೇತುವೆಯನ್ನು ಉದ್ಘಾಟಿಸಲಿದ್ದಾರೆ.
ಸುಮಾರು ₹1,871 ಕೋಟಿ ವೆಚ್ಚದಲ್ಲಿ 8.15 ಕಿಮೀ ಉದ್ದದ ಈ ಸೇತುವೆ ಬಿಹಾರದ ಮೊದಲ ಆರು ಪಥದ ಸೇತುವೆಯಾಗಿದ್ದು, ಉತ್ತರ ಮತ್ತು ದಕ್ಷಿಣ ಬಿಹಾರವನ್ನು ಸಂಪರ್ಕಿಸುವ ಪ್ರಮುಖ ಮೂಲಸೌಕರ್ಯವಾಗಿದೆ.
ಪ್ರಧಾನಿಯ ಆಗಮನದ ಹಿನ್ನೆಲೆಯಲ್ಲಿ ಪಾಟ್ನಾ ವಿಮಾನ ನಿಲ್ದಾಣ ಹಾಗೂ ಕಾರ್ಯಕ್ರಮ ಸ್ಥಳಗಳ ಐದು ಕಿಮೀ ವ್ಯಾಪ್ತಿಯನ್ನು ‘ತಾತ್ಕಾಲಿಕ ಕೆಂಪು ವಲಯ’ ಎಂದು ಘೋಷಿಸಿ ಭದ್ರತಾ ಕ್ರಮಗಳನ್ನು ಕಟ್ಟು ನಿಟ್ಟಾಗಿಸಲಾಗಿದೆ.
ಸೇತುವೆಯು ಕೈಗಾರಿಕೆ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದ್ದು, ಹಳೆಯ ರಾಜೇಂದ್ರ ಸೇತುವೆಗೆ ಪರ್ಯಾಯವಾಗಿ ಸಂಚಾರದ ಸುಗಮತೆಗೆ ಸಹಾಯ ಮಾಡಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
