ನವದೆಹಲಿ, 8 ಮೇ : ಆ್ಯಂಕರ್:ಉತ್ತರ ಪ್ರದೇಶದಲ್ಲಿ ವಿವಿಧ ರಾಜಕೀಯ ಪಕ್ಷಗಳ ಹಲವು ತಾರಾ ಪ್ರಚಾರಕರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಇಂದು ಪ್ರಚಾರ ನಡೆಸಲಿದ್ದಾರೆ. ಬಿಜೆಪಿ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ಅಮಿತ್ ಶಾ, ಲಖೀಂಪುರ್ ಖಿರಿ, ಹರ್ದೋಯಿ, ಮತ್ತು ಕನ್ನೌಜ್ ಜಿಲ್ಲೆಗಳಲ್ಲಿ ರಾಜಕೀಯ ರಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಹಾಗೂ ಬಿಜೆಪಿಯ ಸಾಂಸ್ಥಿಕ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು ಬಾರಾಬಂಕಿ ಮತ್ತು ಗೊಂಡಾ ಜಿಲ್ಲೆಗಳಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಲಿದ್ದಾರೆ.
