ಬೆಂಗಳೂರು,
ಆ್ಯಂಕರ್: 8 ವರ್ಷದ ಬಾಲಕಿಯನ್ನು ದತ್ತು ತೆಗೆದುಕೊಳ್ಳುವಲ್ಲಿ ಕಾನೂನು ಉಲ್ಲಂಘಿಸಿರುವ ಆರೋಪ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಬಂಧನವಾಗಿದ್ದಾರೆ. ಸದ್ಯ ಬೆಂಗಳೂರಿನ ಬ್ಯಾಡರಳ್ಳಿ ಪೊಲೀಸ್ ಠಾಣೆಯ ಪೊಲೀಸರು ಸೋನುಗೌಡರನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಸೋನುಗೌಡ ಪ್ರಕರಣ ಒಂದು ಕಡೆ ಇರಲಿ. ಸದ್ಯ ದತ್ತು ತೆಗೆದುಕೊಳ್ಳಬೇಕು ಎಂದರೆ ಸರ್ಕಾರದ ನಿಯಮಗಳು, ಕಾನೂನು ಏನು ಹೇಳುತ್ತವೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಯಾರು ದತ್ತು ಪಡೆಯಲು ಅರ್ಹರು ಆಗಿರುತ್ತಾರೆ..?
ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸ್ಥಿರವಾಗಿರುವ ಹಾಗೂ ಆರ್ಥಿಕವಾಗಿ ಸಮರ್ಥವಾಗಿರುವ ವ್ಯಕ್ತಿ ಮಾತ್ರ ಮಗುವನ್ನು ದತ್ತು ಪಡೆಯಬೇಕು. ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿ ಮಕ್ಕಳನ್ನು ದತ್ತು ಪಡೆಯುವಂತಿಲ್ಲ. ವಿವಾಹಿತ ದಂಪತಿಯ ಎರಡೂ ಸಂಗಾತಿಗಳು ದತ್ತು ತೆಗೆದುಕೊಳ್ಳಲು ಒಪ್ಪಿಗೆ ಇರಬೇಕು. ಒಬ್ಬ ಮಹಿಳೆ ಗಂಡು-ಹೆಣ್ಣು ಎರಡು ಮಕ್ಕಳನ್ನು ದತ್ತು ಪಡೆಯಬಹುದು. ಒಂಟಿ ಪುರುಷ ಗಂಡು ಮಗುವನ್ನು ಮಾತ್ರ ದತ್ತು ಪಡೆಯಬಹುದು. 3 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿ ವಿಶೇಷ ಅಗತ್ಯತೆಗಳನ್ನು ಹೊಂದಿರುವ ಮಕ್ಕಳು/ಸಂಬಂಧಿ ಅಥವಾ ಮಲ ಪೋಷಕರ ದತ್ತು ಪಡೆದ ಪೋಷಕರ ಹೊರತು ಮತ್ತೊಂದು ಮಗುವನ್ನು ದತ್ತು ತೆಗೆದುಕೊಳ್ಳುವಂತಿಲ್ಲ.
