ರೆಕ್ ಜೇನ್ಸ್,
ಆ್ಯಂಕರ್ :ಐಸ್ ಲ್ಯಾಂಡ್ ನ ರೆಕ್ ಜೇನ್ಸ್ ಪ್ರದೇಶದಲ್ಲಿ ಜ್ವಾಲಾಮುಖಿ ಹಾಗೂ ಲಾವಾರಸ ಹೊರಹೊಮ್ಮುತ್ತಿದ್ದು, ದಕ್ಷಿಣ ಐಸ್ ಲ್ಯಾಂಡ್ ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಹೊಗೆ, ಧೂಮ ಹಾಗೂ ಕಿತ್ತಳೆ ಬಣ್ಣದ ಲಾವಾ ಗಾಳಿಯಲ್ಲಿ ಹೊರಹೊಮ್ಮುತ್ತಿದ್ದು, ಪ್ರಸಿದ್ಧ ಪವಾಸಿತಾಣ ಬ್ಲೂಲಗೂನ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಜನರನ್ನು ತೆರವುಗೊಳಿಸಲಾಗುತ್ತಿದೆ.
