ಮುಂಬೈ, : ಆ್ಯಂಕರ್:ಭಾರತದ ವಿದೇಶ ವಿನಿಮಯ ಮೀಸಲು ನಿಧಿ ಸತತವಾಗಿ ಏರುತ್ತಿದೆ. ಮಾರ್ಚ್ 8ಕ್ಕೆ ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ ಮೊತ್ತ 10.47 ಬಿಲಿಯನ್ ಡಾಲರ್ನಷ್ಟು ಏರಿಕೆ ಆಗಿದೆ. ಇದರೊಂದಿಗೆ ಭಾರತದ ಇತ್ತೀಚಿನ ಫಾರೆಕ್ಸ್ ರಿಸರ್ವ್ಸ್ 636.1 ಬಿಲಿಯನ್ ಡಾಲರ್ ಆಗಿದೆ. ಆರ್ಬಿಐ ದತ್ತಾಂಶದಲ್ಲಿ ಬಿಡುಗಡೆ ಮಾಡಿದೆ. ಹಿಂದಿನ ವಾರದಲ್ಲಿ, ಅಂದರೆ ಮಾರ್ಚ್ 1ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 6.55 ಬಿಲಿಯನ್ ಡಾಲರ್ನಷ್ಟು ಹೆಚ್ಚಾಗಿತ್ತು. ಭಾರತದ ಈಗಿನ ಫಾರೆಕ್ಸ್ ರಿಸರ್ವ್ಸ್ ಸತತವಾಗಿ ಹೆಚ್ಚುತ್ತಿದ್ದು ಎರಡು ವರ್ಷದ ಹಿಂದಿನ ಗರಿಷ್ಠ ಮಟ್ಟಕ್ಕೆ ಸಮೀಪಿಸುತ್ತಿದೆ.
ಆರ್ ಬಿ ಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಮಾರ್ಚ್ 8ರ ವಾರದಲ್ಲಿ ಏರಿಕೆಯಾದ 10.47 ಬಿಲಿಯನ್ ಡಾಲರ್ ಫಾರೆಕ್ಸ್ ರಿಸರ್ವ್ಸ್ ಏರಿಕೆಯಲ್ಲಿ ವಿದೇಶೀ ಕರೆನ್ಸಿ ಆಸ್ತಿ ಹೆಚ್ಚಳವೇ ಅಧಿಕ. ಈ ಫಾರೀನ್ ಕರೆನ್ಸಿ ಅಸೆಟ್ಗಳು 8.12 ಬಿಲಿಯನ್ ಡಾಲರ್ನಷ್ಟು ಏರಿವೆ. ಚಿನ್ನದ ಮೀಸಲು ಸಂಪತ್ತು 2.3 ಬಿಲಿಯನ್ ಡಾಲರ್ನಷ್ಟು ಹಿಗ್ಗಿದೆ. ಇನ್ನು, ಸ್ಪೆಷಲ್ ಡ್ರಾಯಿಂಗ್ ರೈಟ್ಸ್ 31 ಮಿಲಿಯನ್ ಡಾಲರ್, ಐಎಂಎಫ್ನಲ್ಲಿನ ನಿಧಿ 19 ಮಿಲಿಯನ್ ಡಾಲರ್ನಷ್ಟು ಹೆಚ್ಚಿದೆ.
