ಕೆಲವು ಚಲನಚಿತ್ರಗಳು ಟೈಟಲ್ ಗಳು ಸಖತ್ ಸದ್ದು ಮಾಡುತ್ತವೆ. ಈಗ ‘ಜೆಎನ್ಯು’ ಸಿನಿಮಾ ಶೀರ್ಷಿಕೆ ಸದ್ದು ಮಾಡುತ್ತಿದೆ. ‘ಜೆ ಎನ್ ಯು’ ಎಂದರೆ ‘ಜವಾಹರ್ ಲಾಲ್ ನೆಹರು ಯೂನಿವರ್ಸಟಿ’ ಅಲ್ಲ. ಈ ಚಲನಚಿತ್ರದಲ್ಲಿ ‘ಜೆ ಎನ್ಯು’ ಎಂದರೆ ‘ಜಹಾಂಗೀರ್ ನ್ಯಾಷನಲ್ ಯೂನಿವರ್ಸಿಟಿ’ ಎಂದು. ಈ ಚಿತ್ರದ ಮೊದಲ ಪೋಸ್ಟರ್ ಬಿಡಗಡೆ ಆಗಿದೆ. ಈ ಪೋಸ್ಟರ್ ನಲ್ಲಿ ಕೈ ಒಳಗೆ ಭಾರತದ ಮ್ಯಾಪ್ ಇದೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಅನೇಕರು ಇದನ್ನು ಪ್ರೊಪೊಗಾಂಡ ಸಿನಿಮಾ ಎಂದು ಕರೆದಿದ್ದಾರೆ.
ಭಾರತದ ನಕಾಶೆ ಒಳಗೆ ‘ಒಂದು ಶೈಕ್ಷಣಿಕ ವಿಶ್ವವಿದ್ಯಾಲಯವು ರಾಷ್ಟ್ರವನ್ನು ಒಡೆಯಬಹುದೇ?’ ಎಂದು ಬರೆಯಲಾಗಿದೆ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಬಲಪಂಥೀಯರು ‘ಜೆಎನ್ ಯು’ ಶಿಕ್ಷಣ ಸಂಸ್ಥೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಇದು ಭಯೋತ್ಪಾದಕರನ್ನು ಉತ್ಪಾದಿಸುವ ಶಿಕ್ಷಣ ಸಂಸ್ಥೆ ಎಂದು ಅನೇಕರು ಆರೋಪಿಸಿದ್ದು ಇದೆ. ಈಗ ‘ಜೆಎನ್ ಯು’ ಸಿನಿಮಾ ಬರುತ್ತಿರುವುದು ಚರ್ಚೆ ಹುಟ್ಟುಹಾಕಿದೆ.
