ನವದೆಹಲಿ, 6 ಏಪ್ರಿಲ್
ಆ್ಯಂಕರ್ :ಭಾರತ ವಿರೋಧಿ ನಿಲುವಿರುವ ಸರ್ಕಾರ ಅಸ್ತಿತ್ವದಲ್ಲಿದ್ದರೂ ಮಾಲ್ಡೀವ್ಸ್ ವಿಚಾರದಲ್ಲಿ ಭಾರತದ ಅನುಕಂಪ ಮುಂದುವರಿದಿದೆ. ವಿವಿಧ ಆಹಾರವಸ್ತುಗಳ ರಫ್ತಿಗೆ ನಿರ್ಬಂಧ ಹಾಕಲಾಗಿದ್ದರೂ ಮಾಲ್ಡೀವ್ಸ್ ದೇಶಕ್ಕೆ ಭಾರತ ವಿನಾಯಿತಿ ನೀಡಿದೆ. ಸಕ್ಕರೆ, ಗೋಧಿ, ಅಕ್ಕಿ, ಈರುಳ್ಳಿ ಇತ್ಯಾದಿ ಅಗತ್ಯ ವಸ್ತುಗಳನ್ನು ಮಾಲ್ಡೀವ್ಸ್ ದೇಶಕ್ಕೆ ಸೀಮಿತ ಪ್ರಮಾಣದಲ್ಲಿ ರಫ್ತು ಮಾಡಲು ಭಾರತದ ಸರ್ಕಾರ ಅನುಮತಿಸಿದೆ
. ಮಹತ್ವದ ದ್ವಿಪಕ್ಷೀಯ ಒಪ್ಪಂದದಲ್ಲಿ ರಫ್ತು ಕೋಟಾ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ . ಭಾರತೀಯ ರಾಯಭಾರ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿರುವ ಈ ವರದಿ ಪ್ರಕಾರ ಗೋದಿ, ಅಕ್ಕಿ, ಈರುಳ್ಳಿ ಇತ್ಯಾದಿ ಅಗತ್ಯ ವಸ್ತುಗಳ ರಫ್ತು ಕೋಟಾವನ್ನು ಶೇ. 5ರಷ್ಟು ಹೆಚ್ಚಿಸಲಾಗಿದೆ.‘ಮಾಲ್ಡೀವ್ಸ್ ಸರ್ಕಾರದ ಮನವಿ ಮೇರೆಗೆ 2024-25ರ ವರ್ಷದಲ್ಲಿ ನಿರ್ದಿಷ್ಟ ಪ್ರಮಾಣದ ಅಗತ್ಯ ವಸ್ತುಗಳ ರಫ್ತಿಗೆ ಅನುಮಿತಸಲಾಗಿದೆ. ಈ ವಸ್ತುಗಳ ಕೋಟಾವನ್ನೂ ಹೆಚ್ಚಿಸಲಾಗಿದೆ. 1981ರಲ್ಲಿ ಚಾಲನೆಗೆ ಬಂದ ದ್ವಿಪಕ್ಷೀಯ ವ್ಯವಸ್ಥೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅನುಮೋದಿತ ಪ್ರಮಾಣವು ಈವರೆಗಿನ ಗರಿಷ್ಠವೆನಿಸಿದೆ,’ ಎಂದು ರಾಯಭಾರ ಕಚೇರಿ ಅಧಿಕೃತವಾಗಿ ಹೇಳಿಕೆ ನೀಡಿದೆ.
