ಆ್ಯಂಕರ್:ಇತ್ತೀಚೆಗೆ ರಿಲೀಸ್ ಆದ ನಟಿ ಯಾಮಿ ಗೌತಮ್ ನಟನೆಯ ‘ಆರ್ಟಿಕಲ್ 370’ ಚಿತ್ರಕ್ಕೆ ಮೆಚ್ಚುಗೆ ಪಡೆದಿದೆ. ಬಾಕ್ಸ್ ಆಫೀಸ್ನಲ್ಲೂ ಈ ಚಿತ್ರ ಒಳ್ಳೆಯ ಗಳಿಕೆ ಮಾಡುತ್ತಿದೆ. ಈ ಚಿತ್ರವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವೀಕ್ಷಿಸಿದ್ದಾರೆ. ಈ ಚಿತ್ರ ತಂಡದ ಬಗ್ಗೆ, ಚಿತ್ರವನ್ನು ನಿರೂಪಿಸಿದ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಇದರಿಂದ ತಂಡಕ್ಕೆ ಹೊಸ ಬಲ ಸಿಕ್ಕಂತೆ ಆಗಿದೆ. ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
‘ನಾನು ನನ್ನ ಕುಟುಂಬದೊಂದಿಗೆ ದೆಹಲಿಯ ಥಿಯೇಟರ್ ಗೆ ಹೋಗಿ ಆರ್ಟಿಕಲ್ 370 ಸಿನಿಮಾ ವೀಕ್ಷಿಸಿದೆ. ಈ ಚಿತ್ರದ ಬಗ್ಗೆ ನಾನು ಅನೇಕರಿಂದ ಮೆಚ್ಚುಗೆಯನ್ನು ಕೇಳಿದೆ. ಈ ಸಿನಿಮಾ ನೈಜ ಘಟನೆಗಳಿಂದ ಪ್ರೇರಿತವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ತೆಗೆದುಹಾಕುವ ಘಟನೆಗಳನ್ನು ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ’ ಎಂದು ಅವರು ಬರೆದಿದ್ದಾರೆ.
