ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಸ್ಸಾಂ ಮತ್ತು ಅರುಣಾಚಲಪ್ರದೇಶಗಳಿಗೆ ಇಂದಿನಿಂದ ಎರಡು ದಿನಗಳ ಭೇಟಿ ನೀಡಲಿದ್ದು, ಸುಮಾರು ೧೮ ಸಾವಿರ ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶನಿವಾರದಂದು ಚಾಲನೆ ನೀಡಲಿದ್ದಾರೆ.
ಪ್ರಧಾನಿ ಅವರು ಇಂದು ಸಂಜೆ ಯುನೆಸ್ಕೊ ವಿಶ್ವಪರಂಪರೆ ಕಾಜಿರಂಗ ರಾಷ್ಟ್ರೀಯ ಪಾರ್ಕ್ ಮತ್ತು ಹುಲಿ ಸಂರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.
ನಂತರ ಪ್ರಧಾನಿ ಅವರು, ಅರುಣಾಚಲ ಪ್ರದೇಶದಕ್ಕೆ ಭೇಟಿ ನೀಡುವರು. ಜೊರ್ಹಾಟ್ ನಲ್ಲಿ ವಿವಿಧ ೧೮ ಸಾವಿರ ಕೋಟಿ ರೂಪಾಯಿ ಅಧಿಕ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ವರ್ಚುಯಲ್ ಮೂಲಕ ನೆರವೇರಿಸಲಿದ್ದಾರೆ.
ತೀನ್ ಸುಖಿಯಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಗುವಾಹತಿಯ ಬರುವ ಕ್ಯಾನ್ಸರ್ ಸಂಸ್ಥೆ ಬರೂನಿ-ಗುವಾಹತಿ ತೈಲ ಮತ್ತು ಅನಿಲ ಪೈಪ್ ಲೈನ್ ಹಾಗೂ ಆಯಿಲ್ ಇಂಡಿಯಾ ಕಂಪನಿಯ ಎರಡು ಪಂಪಿಂಗ್ ಕೇಂದ್ರಗಳನ್ನು ಉದ್ಘಾಟಿಸಲಿದ್ದಾರೆ. ಇದಲ್ಲದೇ, ಶಿವಸಾಗರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಗುವಾಹತಿಯ ತೈಲ ಶುದ್ಧೀಕರಣ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ದೂದಾಪುರ-ಚಾಯ್ಗಾಂವ್ ಮತ್ತು ಬೊಂಗೈಗಾಂವ್-ಸರ್ಬೋಗ್ ನಡುವಿನ ಜೋಡಿ ರೈಲು ಮಾರ್ಗಗಳನ್ನು ಸೇವೆಗೆ ಸಮರ್ಪಿಸಲಿದ್ದಾರೆ. ಇದಲ್ಲದೇ, ಪ್ರದಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಐದೂವರೆ ಲಕ್ಷ ಮನೆಗಳ ಗೃಹ ಪ್ರವೇಶ ಕಾರ್ಯಕ್ರಮಕ್ಕೂ ವರ್ಚುಯಲ್ ಮೂಲಕ ಚಾಲನೆ ನೀಡಲಿದ್ದಾರೆ.
