
ನವದೆಹಲಿ, 24 ಫೆಬ್ರವರಿ :
ಆ್ಯಂಕರ್ :
ಜಾಗತಿಕ ಜವಳಿ ಎಕ್ಸ್ ಪೊ- ಭಾರತ್ ಟೆಕ್ಸ್ ೨೦೨೪ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಇದೇ ೨೬ ರಂದು ದೆಹಲಿಯಲ್ಲಿ ಉದ್ಘಾಟಿಸಲಿದ್ದಾರೆ. ಕೇಂದ್ರ ಜವಳಿ ಸಚಿವಾಲಯದ ಕಾರ್ಯದರ್ಶಿ ರಚನಾ ಶಾ ಮಾತನಾಡಿ, ನಾಲ್ಕು ದಿನಗಳ ಭಾರತ್ ಟೆಕ್ಸ್ ಸಮಾವೇಶವನ್ನು ’ಭಾರತ್ ಮಂಟಪ’ ಮತ್ತು ’ಯಶೋ ಭೂಮಿಯ’ ೨೨ ಲಕ್ಷ ಚದುರ ಅಡಿ ವಿಸಿರ್ಣದಲ್ಲಿ ಆಯೋಜಿಸಲಾಗಿದೆ. ನೂರಕ್ಕೂ ಅಧಿಕ ದೇಶಗಳಿಂದ ಖರೀದಿದಾರರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಭಾಷಣಕಾರರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
