ಬೆಂಗಳೂರು,19 ಫೆಬ್ರವರಿ :
ಆ್ಯಂಕರ್:
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಇಂದಿನಿಂದ ೫ ದಿನಗಳ ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿ ಅವರು, ಇಂದು ಹುತಾತ್ಮರ ಸ್ತಂಭಕ್ಕೆ ಪುಷ್ಪ ನಮನ ಗೌರವ ಸಲ್ಲಿಸಲಿದ್ದಾರೆ. ಸೆಲ್ಯೂಲಾರ್ ಜೈಲು ಸಂಕೀರ್ಣ ಮತ್ತು ವಸ್ತು ಸಂಗ್ರಹಾಲಯಕ್ಕೂ ಭೇಟಿ ನೀಡಿ, ಬೆಳಕು ಮತ್ತು ಧ್ವನಿ ಪ್ರದರ್ಶನ ವೀಕ್ಷಿಸಲಿದ್ದಾರೆ. ಪೋರ್ಟ್ ಬ್ಲೇರ್ ನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ತಂತ್ರಜ್ಞಾನ ಸಂಸ್ಥೆಗೆ ಭೇಟಿ ನೀಡಲಿದ್ದು, ನಂತರ ನಾಗರಿಕ ಸನ್ಮಾನ ಸ್ವೀಕರಿಸಲಿದ್ದಾರೆ. ನಾಳೆ ೨೦ರಂದು ಕ್ಯಾಂಪ್ಬೆಲ್ ಬೇ ಮತ್ತು ಇಂದಿರಾ ಪಾಯಿಂಟ್ಗೂ ಭೇಟಿ ನೀಡಲಿದ್ದು, ಸುಭಾಷ್ ಚಂದ್ರಬೋಸ್ ದ್ವೀಪದಲ್ಲಿ ಬೆಳಕು ಮತ್ತು ಧ್ವನಿ ವೀಕ್ಷಿಸಲಿದ್ದಾರೆ. ೨೧ರಂದು ಪೋರ್ಟ್ಬ್ಲೇರ್ನಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪಿವಿಟಿಜಿ ಬುಡಕಟ್ಟು ಜನರ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ.
