ಬೆಂಗಳೂರು, 16 ಫೆಬ್ರವರಿ : ಆ್ಯಂಕರ್ :
ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬ. ಹೀಗಾಗಿ ನಿನ್ನೆ ಸಂಜೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನಟ ದರ್ಶನ್ ನಿವಾಸದ ಹತ್ತಿರ ಜಮಾಯಿಸಿದ್ದಾರೆ. ಆರ್ ಆರ್ ನಗರದಲ್ಲಿರೋ ನಟ ದರ್ಶನ್ ಮನೆಗೆ ಅಭಿಮಾನಿಗಳು ದೌಡಾಯಿಸಿದ್ದಾರೆ.
ಇನ್ನೂ, ನಟನ ಮನೆಯ ಬಳಿ ಹಬ್ಬದ ವಾತಾವರಣ ಉಂಟಾಗಿದ್ದು, ರಸ್ತೆ ರಸ್ತೆಗಳಲ್ಲೂ ದರ್ಶನ್ ಕಟೌಟ್, ಬ್ಯಾನರ್ ಗಳು ರಾರಾಜಿಸುತ್ತಿವೆ. ಮಧ್ಯರಾತ್ರಿ 12 ಗಂಟೆಗೆ ಅಭಿಮಾನಿಗಳ ಜೊತೆಗೆ ನಟ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬೆಳಗ್ಗೆಯೂ ರಾಜ್ಯದ ಮೂಲೆ ಮೂಲೆಯಿಂದ ಬರುವ ಅಭಿಮಾನಿಗಳನ್ನು ನಟ ದರ್ಶನ್ ಭೇಟಿಯಾಗಲಿದ್ದಾರೆ.
