ಮಂಡ್ಯ, 9 ಫೆಬ್ರವರಿ :
ಆ್ಯಂಕರ್:ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು ಕಿಚ್ಚು ತಣ್ಣಗಾಗುವ ಲಕ್ಷಣ ಕಾಣ್ತಿಲ್ಲ. ಬಾವುಟ ತೆರವು ಮಾಡಿದ ಕ್ಷಣದಿಂದಲೂ ಬೂದಿಮುಚ್ಚಿದ ಕೆಂಡದಂತಿರೋ ಕೆರಗೋಡು ಗ್ರಾಮದಲ್ಲಿ ಇಂದು ಪ್ರತಿಭಟನೆಯ ಬಿಸಿ ತಟ್ಟಲಿದೆ. ಇದಕ್ಕೆ ಕಾರಣ ಹಿಂದೂಪರ ಸಂಘಟನೆಗಳು ಮಂಡ್ಯ ನಗರ ಹಾಗೂ ಕೆರಗೋಡು ಗ್ರಾಮ ಬಂದ್ಗೆ ಕರೆ ಕೊಟ್ಟಿರೋದು.
ಇದು ಹನುಮ ಧ್ವಜ ಹೋರಾಟದಿಂದ ವಾರದ ಹಿಂದೆ ಕೆರಗೋಡದಲ್ಲಿ ಹೊತ್ತಿಕೊಂಡಿದ್ದ ಆಕ್ರೋಶ ಇನ್ನೂ ಹಾಗೆಯೇ ಇದೆ. ಜನವರಿ 28 ರಂದು ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ವಿಚಾರಕ್ಕೆ ಗಲಾಟೆ ಆಗಿತ್ತು. ಬಳಿಕ ಆವೇಶ ತಗ್ಗಿದ್ದರೂ ಆಕ್ರೋಶ ತಗ್ಗಿರಲಿಲ್ಲ. ಇಂದು ಮಂಡ್ಯ ನಗರ ಹಾಗೂ ಕೆರಗೋಡು ಬಂದ್ ಆಗಲಿದೆ.
ಬಂದ್ ನ ಬಿಸಿ ಸಂಜೆ 6 ಗಂಟೆಯವರೆಗೆ ಇರಲಿದೆ
ಭಜರಂಗದಳ, ವಿಶ್ವ ಹಿಂದೂಪರಿಷತ್ ಹಾಗೂ ಶ್ರೀರಾಮ ಭಜನಾ ಮಂಡಳಿ ಮಂಡ್ಯ ನಗರ ಹಾಗೂ ಕೆರಗೋಡು ಗ್ರಾಮ ಬಂದ್ಗೆ ಮುಂದಾಗಿವೆ. ಸಂಜೆ 6 ಗಂಟೆಯವರೆಗೂ ಈ ಬಂದ್ನ ಬಿಸಿ ಇರಲಿದೆ. ಮೊದಲು ಪ್ರತಿಭಟನೆ ನಡೆಸಲಿರೋ ಹಿಂದೂ ಪರ ಕಾರ್ಯಕರ್ತರು, ಬಳಿಕ ಅಲ್ಲಿಂದ ನೂರಾರು ಬೈಕ್ಗಳ ಮೂಲಕ ಮಂಡ್ಯಕ್ಕೆ ಬರಲಿದ್ದಾರೆ. ಸಿಲ್ವರ್ ಜುಬಿಲಿ ಪಾರ್ಕ್ನಲ್ಲಿರುವ ಆಂಜನೇಯನ ದೇವಾಲಯದಿಂದ ಡಿಸಿ ಕಚೇರಿವರೆಗೆ ಪ್ರತಿಭಟನೆ ಱಲಿ ನಡೆಸಲಿದ್ದಾರೆ. ಇನ್ನು, ಈ ಬಂದ್ಗೆ ಬಿಜೆಪಿ ಬಾಹ್ಯ ಬೆಂಬಲ ಸೂಚಿಸಿದ್ದು, ಬೈಕ್ ಱಲಿಯಲ್ಲಿ ಹಾಗೂ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತ್ರ ಪಾಲ್ಗೊಳ್ತಿದೆ.
