ಹೊಸಪೇಟೆ, 3 ಫೆಬ್ರವರಿ :
ಆ್ಯಂಕರ್: ಹಂಪಿ ಉತ್ಸವ-2024ರ ಹಿನ್ನಲೆಯಲ್ಲಿ ಸಾಸುವೆ ಕಾಳು ಗಣಪ ವೇದಿಕೆಯಲ್ಲಿ ನಾಳೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ 4 ಗಂಟೆಗೆ ಹಗರಿಬೋಮ್ಮನಹಳ್ಳಿಯ ಅಂಬುಜ ಅಕ್ಕಸಾಲಿ ತಂಡದಿಂದ ಸುಗುಮ ಸಂಗೀತ, 4.15 ಕ್ಕೆ ಹೂವಿನಹಡಗಲಿಯ ಕೆ ವನಜಾಕ್ಷಿ ತಂಡದಿಂದ ಜಾನಪದ ಗೀತೆಗಳು, 4.30 ಕ್ಕೆ ಹರಪನಹಳ್ಳಿಯ ಬಾಗಳಿ ಬಣಕಾರ ರೇವಣ್ಣ ತಂಡದಿಂದ ಹಾರ್ಮೋನಿಯಂ ವಾದನ, 4.45 ಕ್ಕೆ ಹೂವಿನಹಡಗಲಿಯ ಹರಿಜನ ನಾಗಪ್ಪ ತಂಡದಿಂದ ಗೀಗೀ ಪದಗಳು, 5ಕ್ಕೆ ವಿಜಯನಗರದ ನಾಗಲಾಪುರನ ಎಸ್ ಶ್ಯಾವಳಿಗೆಪ್ಪ ತಂಡದಿಂದ ರಂಗಗೀತೆಗಳು, 5.15 ಕ್ಕೆ ಕುಷ್ಟಗಿಯ ಎಸ್ ಎಸ್ ಹಿರೇಮಠ್ ತಂಡದಿಂದ ತಬಲ ಸೋಲೋ, 5.30 ಕ್ಕೆ ಹೊಸಪೇಟೆಯ ಪಿ ನಾರಾಯಣ ತಂಡದಿಂದ ಸಮೂಹ ಗಾನ, 5.45 ಕ್ಕೆ ಬೆಂಗಳೂರಿನ ಸರಸ್ವತಿಪುರದ ನಿಶಾ ಗಂಗಾಧರ ತಂಡದಿಂದ ರಂಗಗೀತೆಗಳು, ಸಂಜೆ 6 ಕ್ಕೆ ಮರಿಯಮ್ಮನಹಳ್ಳಿಯ ರಂಗ ಚೌಕಿ ಕಲಾಟ್ರಸ್ಟ್ ತಂಡದಿಂದ ನಾಟಕ, 7 ಕ್ಕೆ ಹರಪನಹಳ್ಳಿಯ ಬಿ ಮೌನೇಶ್ ಕಲ್ಲಹಳ್ಳಿ ತಂಡದಿಂದ “ಧುರ್ಯೋದನನ ಗರ್ವ ಭಂಗ” ನಾಟಕ, 8 ಕ್ಕೆ ಸಿಂಧನೂರಿನ ಮಧುಕವಿ ಸ್ವಾಮಿ ಕಂಬಾಳಿಮಠ್ ತಂಡದಿಂದ ಹೇಮರೆಡ್ಡಿ ಮಲ್ಲಮ್ಮ ನಾಟಕ, 9 ಕ್ಕೆ ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆಯಿಂದ “ಸೋರುತಿಹುದು ಸಂಬಂಧ” ನಾಟಕ, 10 ಕ್ಕೆ ಹೂವಿನ ಹಡಗಲಿಯ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದಿಂದ ಬಯಲಾಟ ಹಾಗೂ ವಿವಿಧ ಕಾರ್ಯಕ್ರಮಗಳು ಸಾಸುವೆ ಕಾಳು ಗಣಪ ವೇದಿಕೆಯಲ್ಲಿ ನಡೆಯಲಿವೆ.
