ಮುಂಬೈ, 2 ಫೆಬ್ರವರಿ :
ಆ್ಯಂಕರ್ :
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ವಹಿವಾಟು ಮೇಲೆ ಆರ್ಬಿಐ ನಿರ್ಬಂಧ ಹಾಕಿರುವುದು ಬಹಳಷ್ಟು ಜನರನ್ನು ಗೊಂದಲಕ್ಕೆ ಕೆಡವಿದೆ. ಕೋಟ್ಯಂತರ ಜನರು ಪೇಟಿಎಂ ಬಳಕೆ ಮಾಡುತ್ತಿದ್ದು, ಅವರೀಗ ಆ್ಯಪ್ನಲ್ಲಿ ವಹಿವಾಟು ನಡೆಸಬೇಕೋ ಬೇಡವೋ ಎಂಬ ಸಂದಿಗ್ಧತೆಯಲ್ಲಿದ್ದಾರೆ. ಪೇಟಿಎಂ ಆ್ಯಪ್ನಲ್ಲಿ ಕೇವಲ ಯುಪಿಐ ವಹಿವಾಟು ಮಾತ್ರವಲ್ಲ, ಸಾಕಷ್ಟು ಸೇವೆಗಳು ಇವೆ. ಷೇರು ಮತ್ತು ಮ್ಯುಚುವಲ್ ಫಂಡ್ ವಹಿವಾಟು, ಟಿಕೆಟ್ ಬುಕಿಂಗ್, ಒನ್ಎನ್ಡಿಸಿ ಪ್ಲಾಟ್ಫಾರ್ಮ್, ಪೇಟಿಎಂ ಹೆಲ್ತ್, ಪೇಟಿಎಂ ಫಾಸ್ಟ್ಯಾಗ್ ಇತ್ಯಾದಿ ಸೇವೆಗಳಿವೆ. ಆದರೆ, ಆರ್ಬಿಐ ನಿರ್ಬಂಧ ಹಾಕಿರುವುದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಮಾತ್ರವೇ. ಫಾಸ್ಟ್ಯಾಗ್, ವ್ಯಾಲಟ್ ಇತ್ಯಾದಿಯಲ್ಲಿ ನಿಮ್ಮ ಹಣ ಇದ್ದರೆ ಎಲ್ಲಿಯೂ ಹೋಗಲ್ಲ, ಚಿಂತೆ ಬೇಕಿಲ್ಲ.
ಪೇಟಿಎಂ ಫಾಸ್ ಟ್ಯಾಗ್, ವ್ಯಾಲಟ್ಗಳನ್ನು ಬಳಸಬಹುದಾ?
ಬಹಳಷ್ಟು ಜನರು ಪೇಟಿಎಂ ವ್ಯಾಲಟ್ಗೆ ಹಾಗೂ ಫಾಸ್ಟ್ಯಾಗ್ಗೆ ಹಾಗೂ ಟ್ರಾನ್ಸಿಟ್ ಕಾರ್ಡ್ಗಳಿಗೆ ರೀಚಾರ್ಜ್ ಮಾಡಿಸಿರುತ್ತಾರೆ. ಆರ್ಬಿಐ ನಿರ್ಬಂಧ ಹಾಕಿರುವುದರಿಂದ ಇದರಲ್ಲಿರುವ ಹಣ ಹೋಗಬಹುದು ಎಂಬ ಸಹಜ ಭಯ ಎಲ್ಲರಲ್ಲೂ ಇದೆ. ಆದರೆ, ಈ ಪ್ರೀಪೇಡ್ ಇನ್ಸ್ಟ್ರುಮೆಂಟ್ಗಳಲ್ಲಿ ಹಾಕಲಾಗಿರುವ ಹಣ ಎಲ್ಲಿಯೂ ಹೋಗಲ್ಲ. ಆರ್ಬಿಐ ನಿರ್ಬಂಧದ ಪ್ರಕಾರ ಫೆಬ್ರುವರಿ 29ರವರೆಗೆ ಇವುಗಳಿಗೆ ಹಣ ತುಂಬಿಸಬಹುದು. ಅದಾದ ಬಳಿಕ ಸಾಧ್ಯವಾಗುವುದಿಲ್ಲ.
