
ಬೆಂಗಳೂರು, 31 ಜನವರಿ:
ಆ್ಯಂಕರ್ :
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ಇಂದು ಮಹತ್ವದ ರಾಜ್ಯ ಕಾರ್ಯಕಾರಿಣಿ ಸಭೆ ಕರೆದಿದ್ದಾರೆ. ತಮ್ಮ ಪಕ್ಷದ ಎಲ್ಲಾ ಪದಾಧಿಕಾರಿಗಳನ್ನು ಸಭೆಗೆ ಆಹ್ವಾನಿಸಿರುವ ಜನಾರ್ದನ ರೆಡ್ಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಇಡಬೇಕಾದ ಮಹತ್ವದ ಹೆಜ್ಜೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಈಗಾಗಲೇ ದೇಶದ ಪ್ರಧಾನಿ ನರೇಂದ್ರ ಮೋದಿರನ್ನು ಹಾಡಿ ಹೊಗಳುತ್ತಿರುವ ರೆಡ್ಡಿ, ಇಂದಿನ ಸಭೆಯ ಬಳಿಕ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆ ಆಗುತ್ತಾರಾ? ಅಥವಾ ಬಾಹ್ಯ ಬೆಂಬಲವೆಂದು ಕೇವಲ ಬೆಂಬಲವನ್ನು ಮಾತ್ರ ಘೋಷಿಸುತ್ತಾರಾ? ಎಂಬುದು ಸಭೆಯ ಬಳಿಕ ತಿಳಿಯಲಿದೆ.
ಒಟ್ಟಿನಲ್ಲಿ ಜನಾರ್ದನ ರೆಡ್ಡಿಯವರ ಇಂದಿನ ನಡೆ ಮತ್ತು ಸಭೆಯಲ್ಲಿ ನಡೆಯಲಿರುವ ಚರ್ಚೆ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ. ಲೋಕಸಭಾ ಚುನಾವಣೆಯ ಹೊತ್ತಲ್ಲಿ ಅವರ ನಡೆ ಯಾವ ಕಡೆ ಎಂಬ ಕಾತರ ಎಲ್ಲರ ಕಾಡಿದೆ.
