ದೆಹಲಿ, 23 ಜನವರಿ(ಹಿ.ಸ):
ಆ್ಯಂಕರ್ :
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಇಂದು ದೆಹಲಿಯ ಕೆಂಪುಕೋಟೆಯಲ್ಲಿ ಪರಾಕ್ರಮ ದಿವಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ನೇತಾಜಿ ಸುಭಾಷ್ ಚಂದ್ರಬೋಸ್ ಗೌರವಾರ್ಥ ೨೦೨೧ ರಿಂದ ಪ್ರತಿವರ್ಷ ಪರಾಕ್ರಮ ದಿವಸ್ ಅನ್ನು ಆಚರಿಸಲಾಗುತ್ತಿದ್ದು, ದೇಶದ ಇತಿಹಾಸವನ್ನು ಪ್ರತಿಬಿಂಬಿಸುವ ರಂಜನೀಯ ಸಾಂಸ್ಕೃತಿಕ ಪ್ರದರ್ಶನಗಳನ್ನು ೯ ದಿನಗಳ ಕಾಲ ಸಾದರಪಡಿಸಲಾಗುತ್ತಿದೆ.
ಪ್ರಧಾನಮಂತ್ರಿ ಇದೇ ಸಂದರ್ಭದಲ್ಲಿ ಗಣರಾಜ್ಯದಿನದ ಸ್ತಬ್ಧಚಿತ್ರ ಮತ್ತು ಸಾಂಸ್ಕೃತಿಕ ಪ್ರದರ್ಶಿಕೆ ಹಾಗೂ ದೇಶದ ವೈವಿಧ್ಯತೆಯನ್ನು ಪ್ರದರ್ಶಿಸುವ ಪ್ರವಾಸೋದ್ಯಮ ಸಚಿವಾಲಯದ ’ಭಾರತ ಪರ್ವ’ ಕಾರ್ಯಕ್ರಮಕ್ಕೂ ವಿದ್ಯುನ್ಮಾನ ಮೂಲಕ ಚಾಲನೆ ನೀಡಲಿದ್ದಾರೆ.
******************
ಹಿಂದೂಸ್ತಾನ್ ಸಮಾಚಾರ್
