ಬೆಂಗಳೂರು, 20 ಜನವರಿ(ಹಿ.ಸ):
ಆ್ಯಂಕರ್ :
ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಸಿಲಿಕಾನ್ ಸಿಟಿಯಲ್ಲಿಯೂ ರಾಮನ ಜಪ ಜೋರಾಗಿದೆ. ಮನೆ-ಮನೆಗಳ ಗೋಡೆ ಮೇಲೆ ಶ್ರೀರಾಮನ ಹೆಸರು ರಾರಾಜಿಸುತ್ತಿದೆ.ಮನೆಗಳ ಗೋಡೆಗಳ ಮೇಲೆ ಸುಂದರವಾಗಿ ಕಾಣುತ್ತಿರುವ ಶ್ರೀರಾಮನ ಹೆಸರು, ಪಕ್ಕದಲ್ಲಿಯೇ ರಾರಾಜಿಸುತ್ತಿರುವ ಹನುಮಂತನ ಚಿತ್ರ, ಪ್ರತಿ ಮನೆಗಳಿಗೂ ತೆರಳಿ ಪೆಂಟಿಂಗ್ ಮಾಡುತ್ತಿರುವ ಶ್ರೀರಾಮನ ಭಕ್ತರು, ಇದೆಲ್ಲವೂ ಕಂಡುಬಂದಿದ್ದು, ನಗರದ ವೈಯಾಲಿ ಕಾವಲ್ ನಲ್ಲಿ.ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಬೆಂಗಳೂರಿನಲ್ಲಿ ರಾಮೋತ್ಸವದ ಸಂಭ್ರಮ ಮನೆ ಮಾಡಿದೆ. ಸಿಟಿಯ ಹಲವು ಭಾಗಗಳಲ್ಲಿ ರಾಮನ ಅನಾವರಣ ಮಾಡುತ್ತಿದ್ದು, ಮನೆಗಳ ಮುಂದೆ ಶ್ರೀರಾಮನ ಹೆಸರು ರಾರಾಜಿಸುತ್ತಿವೆ.
ಹಿಂದೂಸ್ತಾನ್ ಸಮಾಚಾರ್
