ಅಮೆಜಾನ್, 13 ಜನವರಿ(ಹಿ.ಸ):
ಆ್ಯಂಕರ್ :
ಅಮೆಜಾನ್ ವಿಶ್ವದ ಬಹುದೊಡ್ಡ ಕಾಡು. ಅನೇಕ ಸಸ್ಯವರ್ಗವನ್ನು ಹೊಂದಿರುವ ಪ್ರದೇಶ. ಆದರೆ ಅಮೆಜಾನ್ನಲ್ಲಿ ಇದೀಗ ಮರೆಯಾಗಿರುವ ಬೃಹತ್ ನಗರವೊಂದು ಪತ್ತೆಯಾಗಿದೆ.
ಹೌದು. ಇಲ್ಲಿನ ಉಪನೋ ಕಣಿವೆಯಲ್ಲಿ ಕುರುಹುಗಳು ಸಿಕ್ಕಿವೆ. ಪ್ರಾಚೀನ ನಗರದಲ್ಲಿ ಮನೆಗಳು, ಪ್ಲಾಜಾ, ರಸ್ತೆಗಳು ಇವೆಲ್ಲವು ಸಿಕ್ಕಿದೆ. ಆದರೆ ಉಪನೋ ಕಣಿವೆ ಜ್ವಾಲಾಮುಖಿಯ ನೆರಳಿನಲ್ಲಿದೆ. ಅಂದಹಾಗೆಯೇ ಸಂಶೋಧಕರು ಈ ಪ್ರದೇಶವನ್ನು ರಿಮೋಟ್ ಸೆನ್ಸಿಂಗ್ ವಿಧಾನವಾದ LiDAR ಬಳಸಿಕೊಂಡು ಪತ್ತೆಹಚ್ಚಿದ್ದಾರೆ.
ನ್ಯಾಷನಲ್ ಸೆಂಟರ್ ತನಿಖಾ ನಿರ್ದೇಶಕರಾದ ಪ್ರೊಫೆಸರ್ ಸ್ಟೀಪನ್ ರೋಸ್ಟೈನ್ ಈ ಬಗ್ಗೆ ಮಾತನಾಡಿದ್ದು, ‘ಅಮೆಜಾನ್ನಲ್ಲಿ ಸಿಕ್ಕಿರುವುದು ನಮಗೆ ತಿಳಿಯದೇ ಇರುವುದಕ್ಕಿಂದ ಹಳೆಯ ನಗರ. ಇದು ಆಗಿನ ಸಂಸ್ಕೃತಿ ಮತ್ತು ನಾಗರಿಕತೆ ಕಲ್ಪನೆಯನ್ನು ಒದಗಿಸುತ್ತಿದೆ’ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
