ಚಾಮರಾಜನಗರ, 13 ಜನವರಿ(ಹಿ.ಸ):
ಆ್ಯಂಕರ್ :
: ಸಂಕ್ರಾಂತಿ ಹಬ್ಬದಂದು ಯಳಂದೂರು ತಾಲೂಕಿನಲ್ಲಿರುವ ಬಿಳಿಗಿರಿ ರಂಗನಬೆಟ್ಟಕ್ಕೆ ದ್ವಿಚಕ್ರ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಸಂಕ್ರಾಂತಿ ಹಾಗೂ ಚಿಕ್ಕಜಾತ್ರೆ ಹಿನ್ನಲೆಯಲ್ಲಿ ಜ.15 ಹಾಗೂ 16 ರಂದು ಬೈಕ್ಗಳಿಗೆ ನಿರ್ಬಂಧ ಹೇರಿ ಡಿಸಿ ಶಿಲ್ಪಾ ನಾಗ್ ಆದೇಶ ಹೊರಡಿಸಿದ್ದಾರೆ.
ಈ ಎರಡು ದಿನ ವಾಹನ ದಟ್ಟನೆ ಹೆಚ್ಚಾಗುವ ಸಾಧ್ಯತೆ ಇದ್ದು ಬೆಟ್ಟದ ರಸ್ತೆ ಕಿರಿದು ಹಾಗೂ ಕಡಿದಾದ ಕಾರಣ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಕೈಗೊಂಡಿದೆ. ಗುಂಬಳ್ಳಿ ಮತ್ತು ಹೊಂಡರಬಾಳು ಎರಡು ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಗಳಲ್ಲಿಯೂ ನಿರ್ಬಂಧ ವಿಧಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
