
ಜೈಪುರ, 7 ಜನವರಿ(ಹಿ.ಸ):
ಆ್ಯಂಕರ್ :
ಜೈಪುರದ ರಾಜಸ್ಥಾನ ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ನಡೆಯುತ್ತಿರುವ ಪೊಲೀಸ್ ಮಹಾನಿರ್ದೇಶಕರು ಮತ್ತು ಇನ್ಸ್ ಪೆಕ್ಟರ್ ಜನರಲ್ ಗಳ ಅಖಿಲ ಭಾರತ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು. ಪ್ರಧಾನಮಂತ್ರಿ ಅವರು ಇಂದು ಸಮ್ಮೇಳನದ ಎಲ್ಲಾ ಪ್ರಮುಖ ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ. ಮೂರು ದಿನಗಳ ಸಮ್ಮೇಳನವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಉದ್ಘಾಟಿಸಿದರು. ಸಮ್ಮೇಳನವು ಭೌತಿಕ ಮತ್ತು ಆನ್ ಲೈನ್ ಮೂಲಕ ನಡೆಯುತ್ತಿದ್ದು, ಜೈಪುರದಿಂದ ಡಿಜಿಪಿಗಳು, ಐಜಿಪಿಗಳು ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ ಮುಖ್ಯಸ್ಥರು ಭೌತಿಕವಾಗಿ ಹಾಜರಾಗುತ್ತಿದ್ದಾರೆ ಮತ್ತು ದೇಶಾದ್ಯಂತದ ವಿವಿಧ ಶ್ರೇಣಿಯ ೫೦೦ ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳುತ್ತಿದ್ದಾರೆ. ಸೈಬರ್ ಅಪರಾಧ, ಪೊಲೀಸ್ ತಂತ್ರಜ್ಞಾನ, ಭಯೋತ್ಪಾದನೆ ನಿಗ್ರಹ ಸವಾಲುಗಳು, ಎಡಪಂಥೀಯ ಉಗ್ರವಾದ ಮತ್ತು ಜೈಲು ಸುಧಾರಣೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಪೊಲೀಸ್ ಮತ್ತು ಆಂತರಿಕ ಭದ್ರತಾ ವಿಷಯಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚಿಸಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್
