
ನವದೆಹಲಿ, 2 ಜನವರಿ(ಹಿ.ಸ):
ಆ್ಯಂಕರ್ :
ಚುನಾವಣಾ ಬಾಂಡ್ಗಳ ಮಾರಾಟ ಇಂದಿನಿಂದ ಆರಂಭವಾಗಲಿದೆ. ಜನವರಿ ೧೧ ರವರೆಗೆ ಎಸ್ಬಿಐನ ೨೯ ಅಧಿಕೃತ ಶಾಖೆಗಳ ಮೂಲಕ ಮಾರಾಟ ಮಾಡಲಾಗುತ್ತದೆ. ದೆಹಲಿ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ, ಒಡಿಶಾ, ಬಿಹಾರ ಮತ್ತು ಪಶ್ಚಿಮ ಬಂಗಾಳ ಸೇರಿವೆ. ಬಾಂಡ್ಗಳ ಮಾರಾಟದ ೩೦ನೇ ಹಂತದಲ್ಲಿ, ಚುನಾವಣಾ ಬಾಂಡ್ಗಳನ್ನು ವಿತರಿಸಲು ಮತ್ತು ಎನ್ಕ್ಯಾಶ್ ಮಾಡಲು ಎಸ್ಬಿಐಗೆ ಅಧಿಕಾರ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಬಾಂಡ್ಗಳು ವಿತರಣೆಯ ದಿನಾಂಕದಿಂದ ಹದಿನೈದು ಕ್ಯಾಲೆಂಡರ್ ದಿನಗಳವರೆಗೆ ಮಾನ್ಯವಾಗಿರುತ್ತವೆ ಮತ್ತು ಮಾನ್ಯತೆಯ ಅವಧಿ ಮುಗಿದ ನಂತರ ಬಾಂಡ್ ಅನ್ನು ಠೇವಣಿ ಮಾಡಿದರೆ ಯಾವುದೇ ರಾಜಕೀಯ ಪಕ್ಷಕ್ಕೆ ಪಾವತಿಯನ್ನು ಮಾಡಲಾಗುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಬಾಂಡ್ಗಳನ್ನು ಭಾರತೀಯ ನಾಗರಿಕರು ಖರೀದಿಸಬಹುದು. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಥವಾ ರಾಜ್ಯದ ಶಾಸಕಾಂಗ ಸಭೆಯಲ್ಲಿ ಪಡೆದ ಮತಗಳಲ್ಲಿ ಶೇಕಡಾ ಒಂದಕ್ಕಿಂತ ಕಡಿಮೆಯಿಲ್ಲದ ಮತಗಳನ್ನು ಪಡೆದ ನೋಂದಾಯಿತ ರಾಜಕೀಯ ಪಕ್ಷಗಳು ಮಾತ್ರ ಚುನಾವಣಾ ಬಾಂಡ್ಗಳನ್ನು ಸ್ವೀಕರಿಸಲು ಅರ್ಹವಾಗಿರುತ್ತವೆ.
ಹಿಂದೂಸ್ತಾನ್ ಸಮಾಚಾರ್
