ನವದೆಹಲಿ, 29 ಏಪ್ರಿಲ್ :ಆ್ಯಂಕರ್:
೨೦೨೪ರ ಲೋಕಸಭಾ ಚುನಾವಣೆಯ ಆರನೇ ಹಂತದ ಚುನಾವಣೆಗೆ ಚುನಾವಣಾ ಆಯೋಗವು ಇಂದು ಅಧಿಸೂಚನೆಯನ್ನು ಹೊರಡಿಸಲಿದೆ. ಈ ಹಂತದಲ್ಲಿ ಆರು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ೫೭ ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ದೆಹಲಿಯ ಎಲ್ಲಾ ಏಳು ಸ್ಥಾನಗಳು, ಹರಿಯಾಣದ ಎಲ್ಲಾ ಹತ್ತು ಸ್ಥಾನಗಳು, ಉತ್ತರ ಪ್ರದೇಶದ ಹದಿನಾಲ್ಕು ಸ್ಥಾನಗಳು, ಬಿಹಾರ ಮತ್ತು ಪಶ್ಚಿಮ ಬಂಗಾಳದ ತಲಾ ಎಂಟು ಸ್ಥಾನಗಳು, ಒಡಿಶಾದ ಆರು ಸ್ಥಾನಗಳು ಮತ್ತು ಜಾರ್ಖಂಡ್ನ ನಾಲ್ಕು ಸ್ಥಾನಗಳಿಗೆ ಆರನೇ ಹಂತದಲ್ಲಿ ಮತದಾನ ನಡೆಯಲಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮೇ ೬ ಕೊನೆಯ ದಿನವಾಗಿದೆ. ೭ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಮೇ ೯ ಕೊನೆಯ ದಿನವಾಗಿದೆ.ಮೇ ೨೫ ರಂದು ಮತದಾನ ನಡೆಯಲಿದೆ. ಎಲ್ಲಾ ಹಂತಗಳ ಮತ ಎಣಿಕೆ ಜೂನ್ ೪ ರಂದು ನಡೆಯಲಿದೆ.
