ಅಯೋಧ್ಯೆ, 29 ಡಿಸೆಂಬರ್(ಹಿ.ಸ):
ಆ್ಯಂಕರ್ :
ಡಿಸೆಂಬರ್ 30 ರಂದು (ನಾಳೆ) ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಉದ್ಘಾಟಿಸಲಿರುವ ವಿಮಾನ ನಿಲ್ದಾಣಕ್ಕೆ ‘ಮಹರ್ಷಿ ವಾಲ್ಮಿಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ನಾಮಕರಣ ಮಾಡಲಾಗುತ್ತದೆ. ಏರ್ಪೋರ್ಟ್ಗೆ ರಾಮಾಯಣ ಮಹಾಕಾವ್ಯದ ಸೃಷ್ಟಿಕೃರ್ತ ಹಾಗೂ ಪೌರಾಣಿಕ ಕವಿ ವಾಲ್ಮಿಕಿ ಹೆಸರನ್ನು ಇಡಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.
ಇದಕ್ಕೂ ಮೊದಲು ‘ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಅಯೋಧ್ಯೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎನ್ನಲಾಗುತ್ತಿತ್ತು. ರಾಮಮಂದಿರ ಉದ್ಘಾಟನೆಯು ಜನವರಿ 22 ರಂದು ಆಗಲಿದೆ. ಅದಕ್ಕೂ ಮೊದಲೇ ಅಯೋಧ್ಯೆ ಏರ್ ಪೋರ್ಟ್ ಲೋಕಾರ್ಪಣೆ ಆಗಲಿದೆ.
ಉದ್ಘಾಟನೆ ಬೆನ್ನಲ್ಲೇ ಇಂಡಿಗೋ ಮತ್ತು ಏರ್ ಇಂಡಿಯಾ ವಿಮಾನಗಳು ಮೊದಲ ಬಾರಿಗೆ ಕಾರ್ಯಾಚರಣೆ ಆರಂಭಿಸಲಿವೆ. ಈ ಎರಡು ವಿಮಾನಯಾನ ಸಂಸ್ಥೆಗಳು ದೆಹಲಿ, ಮುಂಬೈ ಮತ್ತು ಅಮಹ್ಮದಾಬಾದ್ನಿಂದ ಅಯೋಧ್ಯೆಗೆ ಸಂಪರ್ಕ ಕಲ್ಪಿಸಲಿವೆ. ಏರ್ಪೋರ್ಟ್ ನಿರ್ಮಾಣಕ್ಕೆ ಸರಿಸುಮಾರು 1450 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.6500 ಚಂದರ್ ಮೀಟರ್ ಹೊಂದಿರುವ ನೂತನ ಟರ್ಮಿನಲ್ ಬಿಲ್ಡಿಂಗ್, 600 ಪೀಕ್-ಅವರ್ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಿದೆ. ವಾರ್ಷಿಕವಾಗಿ 10 ಲಕ್ಷ ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯವನ್ನು ಹೊಂದಿದೆ.
ಹಿಂದೂಸ್ತಾನ್ ಸಮಾಚಾರ್
