ಬೆಂಗಳೂರು, 28 ಡಿಸೆಂಬರ್(ಹಿ.ಸ):
ಆ್ಯಂಕರ್ :
ಕರವೇ ಕಾರ್ಯಕರ್ತರ ಬಂಧನ ಹಾಗೂ ಪೊಲೀಸರು ಅವರನ್ನು ನಡೆಸಿಕೊಂಡ ರೀತಿಯ ಬಗ್ಗೆ ಅಧ್ಯಕ್ಷ ನಾರಾಯಣ ಗೌಡ ಕಿಡಿ ಕಾರಿದ್ದಾರೆ. ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ಮೇಲೆ ಹರಿಹಾಯ್ದಿದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಕರವೇ ಅಧ್ಯಕ್ಷ ಟಿಎ ನಾರಾಯಣ ಗೌಡ, ದೌರ್ಜನ್ಯ, ದಬ್ಬಾಳಿಕೆ ಮಾಡಿ ನಮ್ಮ ಕಾರ್ಯಕರ್ತರಿಗೆ ಭಾರೀ ಹಿಂಸೆ ಕೊಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರೇ ನೀವು, ನಿಮ್ಮ ಸರ್ಕಾರ ನಮ್ಮನ್ನ ಬಳಸಿಕೊಂಡು ಅನ್ಯಾಯ ಮಾಡುತ್ತಿದ್ದೀರಿ. ಮುಂದಿನ ಲೋಕಸಭಾ ಎಲೆಕ್ಷನ್ ಅಲ್ಲಿ ಎಲ್ಲಾ ಉತ್ತರ ಸಿಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮೆಡಿಕಲ್ ಟೆಸ್ಟ್ ಮಾಡಿಸಲು ಇಲ್ಲಿಗೆ ಕರೆದುಕೊಂಡು ಬಂದರಂತೆ. ಬೆಳಗ್ಗೆ ಬಂದವ್ರು ಇಲ್ಲಿವರೆಗೂ ಊಟ ಮಾಡಿಲ್ಲ. ಖೈದಿಗಳನ್ನ ಹೇಗೆ ನಡೆಸಿಕೊಳ್ಳಬೇಕು ಎಂಬುದು ಇವರಿಗೆ ಗೊತ್ತಿಲ್ಲ. ನನಗೆ ಆರೋಗ್ಯದ ಪರಿಸ್ಥಿತಿ ಚೆನ್ನಾಗಿಲ್ಲ. ಮೆಡಿಸನ್ ತೆಗೆದುಕೊಂಡಿಲ್ಲ. ನನ್ನ ನಾಡು, ನುಡಿಗಾಗಿ ಇಲ್ಲೇ ಸಾವನ್ನಪ್ಪಿದರು ಚಿಂತೆಯಿಲ್ಲ. ಕನ್ನಡಿಗರು ನಾಳೆ ಬೀದಿ ಬೀದಿಯಲ್ಲೂ ಚಳುವಳಿ ಪ್ರಾರಂಭ ಮಾಡಬೇಕು. ಸಿಎಂ ಹಾಗೂ ಗೃಹಸಚಿವರ ಮನೆ ಮುಂದೆ ಪ್ರತಿಭಟನೆ ಮಾಡಬೇಕು ಎಂದು ಇಡೀ ರಾಜ್ಯದಲ್ಲಿನ ಕರವೇ ಕಾರ್ಯಕರ್ತರಿಗೆ ನಾರಾಯಣ ಗೌಡರು ಕರೆ ಕೊಟ್ಟರು.ಏನ್ ಮಾಡ್ತಾರೋ ಮಾಡಲಿ, ಗುಂಡಿಕ್ಕಿ ಕೊಲ್ಲಲಿ ಚಿಂತೆಯಿಲ್ಲ, ನಾವು ಅಂಜೋದಿಲ್ಲ, ಹೋರಾಟದಿಂದ ಹಿಂದೆ ಹೋಗಲ್ಲ ಎಂದು ಬೆಂಗಳೂರಿನಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡ ಗುಡುಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
