ಕೋಲಾರ, ೧೯ ಡಿಸೆಂಬರ್ (ಹಿ.ಸ) :
ಆ್ಯಂಕರ್ : ಕೆಜಿಎಫ್ ಪೊಲೀಸ್ ಜಿಲ್ಲೆಯ ಸೈಬರ್ ಕ್ರೆö ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ, ಆತನಿಂದ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಎರಡು ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬೇತಮ0ಗಲ ಹೊರವಲಯದ ಗೋಸಿನಕೆರೆ ಮುಂದೆ ಗಾಂಜಾವನ್ನು ಮಾರಾಟ ಮಾಡಲು ಬರುತ್ತಿದ್ದ ಬಗ್ಗೆ, ಖಚಿತ ಮಾಹಿತಿ ಆಧರಿಸಿ, ಸೈಬರ್ ಕ್ರೆöÊಂ ಅಪರಾಧ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಲಕ್ಷಿö್ಮನಾರಾಯಣ ಮತ್ತು ಸಿಬ್ಬಂದಿಗಳು ಕೂಡಲೇ ದಾಳಿ ನಡೆಸಿ, ಆಂದ್ರಪ್ರದೇಶದ ರಾಮಕುಪ್ಪಂ ನಿವಾಸಿ ಎಸ್.ಫಾರೂಕ್ಬಾಷ ಎಂಬಾತನನ್ನು ಬಂಧಿಸಿ, ಆತನಿಂದ ಸುಮಾರು ಒಂದು ಲಕ್ಷ ರೂಪಾಯಿ ಬೆಲೆಬಾಳುವ ೦೨ ಕೆಜಿ ೨೫೦ ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
ಆರೋಪಿಯನ್ನು ಬಂಧಿಸಿ, ಗಾಂಜಾ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಪಿಐ ಲಕ್ಷಿö್ಮನಾರಾಯಣ, ಸಿಬ್ಬಂದಿಗಳಾದ ರಘುನಾಥ್, ಚೇತನ್ಯಾದವ್, ಶೇಷಾದ್ರಿ, ರಮೇಶ್, ಚೇತನ್ಕುಮಾರ್ ಮತ್ತು ಶರಣ್ಕುಮಾರ್ ರವರುಗಳನ್ನೊಳಗೊಂಡ ತಂಡವು ಯಶಸ್ವಿಯಾಗಿದ್ದು, ತಂಡವನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.
ಚಿತ್ರ : ಕೆಜಿಎಫ್ ಸೈಬರ್ ಕ್ರೆö ಪೊಲೀಸರು ಗಾಂಜ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಗಾಂಜ ವಶಪಡಿಸಿಕೊಂಡಿದ್ದಾರೆ.
