
ಮುಂಬೈ, 17 ಡಿಸೆಂಬರ್(ಹಿ.ಸ):
ಆ್ಯಂಕರ್ :
ನಟ ಶಾರುಖ್ ಖಾನ್ ಹಾಗೂ ತಾಪ್ಸಿ ಪನ್ನು ಅವರು ಜೋಡಿಯಾಗಿ ನಟಿಸಿರುವ ‘ಡಂಕಿ’ ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 21ರಂದು ಈ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದು ರಾಜ್ಕುಮಾರ್ ಹಿರಾನಿ ನಿರ್ದೇಶನ ಮಾಡಿರುವ ಸಿನಿಮಾ ಆದ್ದರಿಂದ ನಿರೀಕ್ಷೆ ಡಬಲ್ ಆಗಿದೆ. ಈಗ ‘ಡಂಕಿ’ ಸಿನಿಮಾದ ಸೆನ್ಸಾರ್ ಪ್ರಕ್ರಿಯೆ ಮುಗಿದಿದ್ದು, ಯು/ಎ ಪ್ರಮಾಣಪತ್ರ ಪಡೆದುಕೊಂಡಿದೆ. ಅಲ್ಲದೇ, ಸಿನಿಮಾದ ಅವಧಿ 2 ಗಂಟೆ 41 ನಿಮಿಷ ಇದೆ ಎಂಬುದು ಕೂಡ ತಿಳಿದುಬಂದಿದೆ.
ಯು/ಎ ಪ್ರಮಾಣ ಪತ್ರ ಸಿಕ್ಕರೆ ಚಿತ್ರಕ್ಕೆ ತುಂಬ ಅನುಕೂಲ ಆಗುತ್ತದೆ. 18 ವರ್ಷಕ್ಕಿಂತ ಕಿರಿಯ ಪ್ರೇಕ್ಷಕರು ಕೂಡ ಪಾಲಕರ ಜೊತೆ ಬಂದು ಈ ಸಿನಿಮಾವನ್ನು ನೋಡಬಹುದು. ಹಾಗಾಗಿ ಮಕ್ಕಳೊಂದಿಗೆ ಬಂದು ‘ಡಂಕಿ’ ಸಿನಿಮಾವನ್ನು ವೀಕ್ಷಿಸಬೇಕು ಎಂದುಕೊಂಡ ಪ್ರೇಕ್ಷಕರಿಗೆ ಯಾವುದೇ ಅಡ್ಡಿ ಇರುವುದಿಲ್ಲ. ಇದರಿಂದ ಫ್ಯಾಮಿಲಿ ಪ್ರೇಕ್ಷಕರನ್ನು ಚಿತ್ರ ಸೆಳೆದುಕೊಳ್ಳುತ್ತದೆ.
ಹಿಂದೂಸ್ತಾನ್ ಸಮಾಚಾರ್
