ದೆಹಲಿ, 14 ಡಿಸೆಂಬರ್(ಹಿ.ಸ):
ಆ್ಯಂಕರ್ :
ಬುಧವಾರ ನಡೆದಿದ್ದ ಸರ್ವಪಕ್ಷ ಸಭೆ ವೇಳೆ ದಾಳಿಕೋರರಿಗೆ ಪಾಸ್ ನೀಡಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ವಜಾ ಮಾಡಬೇಕೆಂದು ಟಿಎಂಸಿ ಆಗ್ರಹ ಮಾಡಿದೆ. ಪ್ರಶ್ನೆಗಾಗಿ ಲಂಚ ಪ್ರಕರಣದಲ್ಲಿ ನಮ್ಮ ಪಕ್ಷದ ಸಂಸದೆ ಮಹುವಾ ಮೊಯಿತ್ರಾರನ್ನು ವಜಾ ಮಾಡಿದ ರೀತಿಯಲ್ಲೇ, ದಾಳಿಕೋರರಿಗೆ ಪಾಸ್ ನೀಡಿದ್ದಕ್ಕಾಗಿ ಪ್ರತಾಪ್ ಸಿಂಹ ವಜಾ ಮಾಡುವಂತೆ ಸಂಸದರು ಆಗ್ರಹಿಸಿದರು.
ವಿಪಕ್ಷಗಳ ತುರ್ತು ಸಭೆ: ರಾಷ್ಟ್ರಪತಿ ಮುರ್ಮು ಭೇಟಿ
ಸಂಸತ್ತಿನ ಲೋಕಸಭೆ ಪ್ರಾಂಗಣದಲ್ಲಿ ವೀಕ್ಷಕರ ಗ್ಯಾಲರಿಯಿಂದ ಜಿಗಿದು ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ ಬೆನ್ನಲ್ಲೇ ಇಂಡಿಯಾ ಕೂಟದ ನಾಯಕರು ಗುರುವಾರ ತುರ್ತು ಸಭೆ ನಡಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ. ಈ ಕುರಿತು ಮಾತನಾಡಿದ ಟಿಎಂಸಿ ಸಂಸದ ಸುದೀಪ್ ಬಂಡೋಪಾದ್ಯಾಯ, ‘ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್
