ಜೋಹಾನ್ಸ್ ಬರ್ಗ್, 14 ಡಿಸೆಂಬರ್(ಹಿ.ಸ):
ಆ್ಯಂಕರ್ :
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಟಿ20 ಪಂದ್ಯಗಳ ಸರಣಿಯ ಮೂರನೇ ಮತ್ತು ನಿರ್ಣಾಯಕ ಪಂದ್ಯ ಜೋಹಾನ್ಸ್ಬರ್ಗ್ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಇಂದು ನಡೆಯಲಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಯಿತು, ನಂತರ ಎರಡನೇ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ಭಾರತವನ್ನು 5 ವಿಕೆಟ್ಗಳಿಂದ ಸೋಲಿಸಿತು. ಹೀಗಾಗಿ ಮೂರನೇ ಟಿ20 ಯಲ್ಲಿ ಭಾರತ ಗೆದ್ದರಷ್ಟೆ ಸರಣಿ ಸೋಲನ್ನು ತಪ್ಪಿಸಬಹುದು. 2024 ರ ಟಿ20 ವಿಶ್ವಕಪ್ನ ಸಿದ್ಧತೆಗಳ ಮೇಲೆ ಕಣ್ಣಿಟ್ಟಿರುವ ರಾಹುಲ್ ದ್ರಾವಿಡ್ -ಸೂರ್ಯಕುಮಾರ್ ಯಾದವ್ ಇಂದಿನ ಪಂದ್ಯ ಗೆಲ್ಲಲು ಮಾಸ್ಟರ್ ರೂಪಿಸಿರುವುದು ಖಚಿತ.
ಜೊಹಾನ್ಸ್ಬರ್ಗ್ನಲ್ಲಿ ಭಾರತ ಸೋತರೆ, 2023 ರಲ್ಲಿ ತವರಿನಿಂದ ಹೊರಗೆ ಎರಡನೇ ಬಾರಿ ಟಿ20 ಸರಣಿ ಸೋತಂತಾಗುತ್ತದೆ. ಟೀಮ್ ಇಂಡಿಯಾ ಈ ವರ್ಷದ ಆರಂಭದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-3 ಅಂತರದಲ್ಲಿ ಸೋತಿತ್ತು. 2017 ರಿಂದ, ಭಾರತವು ಮೂರು ಟಿ20I ಸರಣಿಗಳನ್ನು ವಿದೇಶದಲ್ಲಿ ಕಳೆದುಕೊಂಡಿದೆ. ಇದೀಗ ಗೆಲ್ಲಲೇ ಬೇಕಾದ ಪಂದ್ಯಕ್ಕೆ ಬದಲಾವಣೆ ಖಚಿತ ಎನ್ನಲಾಗಿದೆ.
ಹಿಂದೂಸ್ತಾನ್ ಸಮಾಚಾರ್
