ರಾಯಚೂರು, 13 ಡಿಸೆಂಬರ್(ಹಿ.ಸ):
ಆ್ಯಂಕರ್ : ವಿಪತ್ತು ನಿರ್ವಾಹಣಾ ಯೋಜನೆಯ ಅಡಿಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು (ಡಿಡಿಎಂಎ)ಬಲಪಡಿಸಲು ಗುತ್ತಿಗೆ ಆಧಾರದ ಮೇಲೆ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತದ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವ ಹಿನ್ನಲೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರು: ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರನ್ನು 12 ತಿಂಗಳವರೆಗೆ ನೇಮಿಸಲಾಗುತ್ತದೆ. ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತುಗಳನ್ನು ಎದುರುಸಲು ತಡೆಗಟ್ಟುವಿಕೆ, ತಗ್ಗಿಸುವಿಕೆ, ಸನ್ನದ್ಧತೆ ಮತ್ತು ಸಾಮಥ್ರ್ಯ ವರ್ಧನೆಗಾಗಿ ಕ್ರಮಗಳನ್ನು ಕೈಗೊಳ್ಳುವಲ್ಲಿ ಜಿಲ್ಲಾಧಿಕಾರಿಗಳ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರದ ಇತರೆ ಸದಸ್ಯರಿಗೆ ಸಹಾಯ ಮಾಡುತ್ತಾರೆ. ಎನ್ಡಿಎಂಎ ಮತ್ತು ಎಸ್ಡಿಎಂಎ ರೂಪಿಸಿದ ವಿಪತ್ತು ಅಪಾಯ ಕಡಿತ ತಂತ್ರಗಳನ್ನು ಅನುμÁ್ಠನಗೊಳಿಸುವ ಮೂಲಕ ವಿಪತ್ತಿನ ವಿರುದ್ಧ ಸಮುದಾಯದ ಸ್ಥಿತಿಸ್ಥಾಪಕತ್ವವನ್ನು ಒಳಪಡಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಎಲ್ಲಾ ಪಾಲುದಾರರೊಂದಿಗೆ ಸಮನ್ವಯ ಸಾಧಿಸುತ್ತಾರೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ):- ಒಬ್ಬ ಪರಿಣಿತರನ್ನು ನೇಮಿಸಿಕೊಳ್ಳಲಾಗುವುದು, ಸರಕಾರ ನಿಗದಿಪಡಿಸಿದಂತೆ ಆಯ್ಕೆಯಾದ ಒಬ್ಬರಿಗೆ ರೂ.48,400/-ಗಳನ್ನು ಮಾಸಿಕ ಸಂಭಾವನೆಯಾಗಿ ನೀಡಲಾಗುತ್ತದೆ.
ಕನಿಷ್ಠ ವಿದ್ಯಾರ್ಹತೆ ಮತ್ತು ಅನುಭವ: ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಜ್ಞಾನ/ ಸಮಾಜ ವಿಜ್ಞಾನ/ ಗ್ರಾಮೀಣಾಭಿವೃದ್ಧಿ/ ಪರಿಸರ ವಿಜ್ಞಾನ/ ನಿರ್ವಹಣೆಯಲ್ಲಿ 2ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು, ವಿಪತ್ತು ನಿರ್ವಹಣೆಯಲ್ಲಿ ಸಂಬಂಧಿತ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ನೀಡಲಾಗುವುದು, ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆ ಮತ್ತು ಭಾರತೀಯ ವಿಪತ್ತು ಸಂಪನ್ಮೂಲ ಜಾಲದ ಜ್ಞಾನವನ್ನು ಹೊಂದಿರಬೇಕು.
ವಿಪತ್ತು ನಿರ್ವಹಣಾ ಕಾಯಿದೆ-2005 ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಾರ್ಗಸೂಗಳನ್ನು ಚನ್ನಾಗಿ ತಿಳಿದಿರಬೇಕು. ಈ ಹುದ್ದೆಯಲ್ಲಿ ಆಸಕ್ತಿ ಹೊಂದಿದ್ದರೆ ಶಿಕ್ಷಣದ ಸ್ವಯಂ ದೃಢೀಕರಿಸಿ ಪ್ರತಿಗಳು, ಅನುಭವ ಪ್ರಮಾಣಪತ್ರ ಮತ್ತು ಇತ್ತಿಚೀನ ಭಾವಚಿತ್ರ ಲಗತ್ತಿಸಿ, ಅರ್ಜಿಗಳನ್ನು ಸಲ್ಲಿಸಲು ಡಿ.18 ಕೊನೆಯ ದಿನಾಂಕವಾಗಿದ್ದು, ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08532-229011ಗೆ ಸಂಪರ್ಕಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
