ದೆಹಲಿ, 13ಡಿಸೆಂಬರ್(ಹಿ.ಸ):
ಆ್ಯಂಕರ್ :
ಇಬ್ಬರು ವ್ಯಕ್ತಿಗಳು ಲೋಕಸಭೆ ಪ್ರವೇಶಿಸಿ ಅಶ್ರುವಾಯು ಸಿಡಿಸಿದ ಘಟನೆ ಇಂದು ಲೋಕಸಭೆಯಲ್ಲಿ ನಡೆದಿದೆ. ಸಂಸತ್ ಮೇಲೆ ಉಗ್ರ ದಾಳಿ ನಡೆದು ಇಂದಿಗೆ 22 ವರ್ಷ. ಇದೇ ದಿನ ಲೋಕಸಭೆಯಲ್ಲಿ ಭದ್ರತಾಲೋಪ ಸಂಭವಿಸಿದ್ದು ದಿಗಿಲು ಹುಟ್ಟಿಸಿದೆ. ಇಬ್ಬರು ಯುವಕರು ಗ್ಯಾಲರಿಯಿಂದ ಜಿಗಿದರು. ಅವರು ಅನಿಲ ಹೊರಸೂಸುವಂಥಾ ಏನೋ ವಸ್ತು ಎಸೆದರು, ಅವರನ್ನು ಸಂಸದರು ಹಿಡಿದಿದ್ದಾರೆ..ಆಮೇಲೆ, ಅವರನ್ನು ಭದ್ರತಾ ಸಿಬ್ಬಂದಿಗಳು ಹೊರಗೆ ಕರೆತಂದರು. ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಇದು ಖಂಡಿತವಾಗಿಯೂ ಭದ್ರತಾ ಲೋಪವಾಗಿದೆ ಎಂದುಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ಅಂದ ಹಾಗೆ ಲೋಕಸಭೆಯ ಒಳಗೆ ಪ್ರವೇಶಿಸಿದ ವ್ಯಕ್ತಿಯ ಹೆಸರು ಸಾಗರ್ ಎಂದು ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ಮಾಹಿತಿ ನೀಡಿದ್ದಾರೆ. ಈ ವ್ಯಕ್ತಿ ಮೈಸೂರಿನ ಸಂಸದರ ಅತಿಥಿ ಎಂದು ಹೇಳಿ ಸಂಸತ್ ಪ್ರವೇಶಿಸಿದ್ದರು ಎಂದು ಡ್ಯಾನಿಶ್ ಅಲಿ ಹೇಳಿದ್ದಾರೆ.ಇಲ್ಲಿಗೆ ಬರುವವರೆಲ್ಲರೂ – ಅದು ಸಂದರ್ಶಕರು ಅಥವಾ ವರದಿಗಾರರೇ ಆಗಿರಲಿ ಅವರು ಟ್ಯಾಗ್ಗಳನ್ನು ಹೊಂದಿರುವುದಿಲ್ಲ. ಹಾಗಾಗಿ, ಸರ್ಕಾರವು ಈ ಬಗ್ಗೆ ಗಮನ ಹರಿಸಬೇಕು ಎಂದು ನಾನು ಭಾವಿಸುತ್ತೇನೆ. ಇದು ಸಂಪೂರ್ಣ ಭದ್ರತಾ ಲೋಪ ಎಂದು ನಾನು ಭಾವಿಸುತ್ತೇನೆ. ಲೋಕಸಭೆಯ ಒಳಗೆ ಏನು ಬೇಕಾದರೂ ಆಗುತ್ತಿತ್ತು ಎಂದು ಲೋಕಸಭೆಯಲ್ಲಿ ಭದ್ರತಾ ಲೋಪದ ಬಗ್ಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ (ಎಸ್ಪಿ) ಸಂಸದ ಡಿಂಪಲ್ ಯಾದವ್ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
