ರಾಯಚೂರು, 11 ಡಿಸೆಂಬರ್(ಹಿ.ಸ):
ಆ್ಯಂಕರ್ : ಭಾರತೀಯ ಜನತಾ ಪಾರ್ಟಿಯ ರಾಯಚೂರು ಜಿಲ್ಲಾ ವತಿಯಿಂದ ಇಂದು ಬೆಳಿಗ್ಗೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳ ಅಕ್ರಮ ಹಣ ಸಂಗ್ರಹವನ್ನು ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸಂಸದರಾದ ಧೀರಜ್ ಸಾಹು ಅವರ ಅಕ್ರಮ ಹಣ ಸಂಗ್ರಹವನ್ನು ಖಂಡಿಸಿ ಬಿಜೆಪಿ ರಾಯಚೂರು ಜಿಲ್ಲಾವತಿಯಿಂದ ಪ್ರತಿಭಟನೆ ನಡೆಸಲಾಯಿತು. ಭ್ರಷ್ಠಾಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಜನಪ್ರತಿನಿಧಿಗಳು ಮತ್ತು ಮುಖಂಡರ ವಿರುದ್ದ ಘೋಷಣೆ ಕೂಗಲಾಯಿತು,
ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾವದ ಅವರು ಮಾತನಾಡಿ ಜಾರ್ಖಂಡ್ ರಾಜ್ಯದ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸಂಸದರಾದ ಧೀರಜ್ ಸಾಹು ಅವರ ಮನೆ, ಕಛೇರಿಗಳ ಮೇಲೆ ನಡೆದಿರುವ ಐಟಿ ದಾಳಿಯಲ್ಲಿ 300 ಕೋಟಿಗೂ ಅಧಿಕ ಹಣ ಸಿಕ್ಕಿರುತ್ತದೆ, ಭ್ರಷ್ಟರ ಕೂಪವಾದ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದರು,
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಪಾಟೀಲ್, ರಾಜಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ ರೆಡ್ಡಿ, ಗಿರೀಶ್ ಕನಕವೀಡು, ನಗರ ಅಧ್ಯಕ್ಷ ಗೋವಿಂದ, ಸಿದ್ದನಗೌಡ ನೆಲಹಾಳ, ಜಂಬಣ್ಣ ನೀಲಗಲ್, ವಿಷ್ಣುವರ್ಧನ್ ರೆಡ್ಡಿ ದಿನ್ನಿ, ಈ.ಶಶಿರಾಜ್, ವಿಜಯರಾಜೇಶ್ವರಿ, ಸುಮ ಆಶೋಕ್ ಗಸ್ತಿ, ವಿಜಯಕುಮಾರ್ ಸಜ್ಜನ್, ಜಂಬಣ್ಣ ಮಂದಕಲ್, ಹಾಗೂ ಪಕ್ಷದ ಪ್ರಮುಖರು ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್
