ಟೆಲ್ ಅವೀವ್,6 ಡಿಸೆಂಬರ್(ಹಿ.ಸ):
ಆ್ಯಂಕರ್ :
: ಇಸ್ರೇಲ್-ಹಮಾಸ್ ನಡುವಿನ ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಎರಡೂ ಸೇನೆಗಳೂ ತಂತ್ರ-ಪ್ರತಿತಂತ್ರ ನಡೆಸುತ್ತಲೇ ಇವೆ. ಆದರೀಗ ಹಮಾಸ್ ಉಗ್ರರು ಗಾಜಾಪಟ್ಟಿಯಲ್ಲಿ ಬಳಸಿದ ಸುರಂಗಗಳನ್ನ ಕೃತಕ ಪ್ರವಾಹ ಸೃಷ್ಟಿಸುವ ಮೂಲಕ ಧ್ವಂಸಗೊಳಿಸಲು ಇಸ್ರೇಲ್ ಸೇನೆ ಪ್ಲ್ಯಾನ್ ಮಾಡಿದೆ ಎಂದು ವರದಿಯಾಗಿದೆ.
ಹಮಾಸ್ ಉಗ್ರರ ವಿರುದ್ಧ ಸಮರ ಸಾರಿಸುವ ಇಸ್ರೇಲ್ ಸುರಂಗಗಳಲ್ಲಿ ಪ್ರವಾಸ ಸೃಷ್ಟಿ ಉಗ್ರರನ್ನು ಮಟ್ಟಹಾಕಲು ಕೆಲ ದಿನಗಳ ಹಿಂದೆಯೇ ಪ್ಲ್ಯಾನ್ ಮಾಡಿದಂತಿದೆ. ಏಕೆಂದರೆ ಕಳೆದ ನವೆಂಬರ್ ಮಧ್ಯದಲ್ಲಿಯೇ ಇಸ್ರೇಲ್ ಸೇನೆಯು ಅಲ್-ಶಾತಿ ನಿರಾಶ್ರಿತರ ಶಿಬಿರದ ಉತ್ತರಕ್ಕೆ ಕನಿಷ್ಠ ಒಂದು ಮೈಲಿಯಷ್ಟು ದೂರಕ್ಕೆ 5 ಪಂಪ್ಗಳನ್ನ ನಿರ್ಮಿಸಿದೆ. ಈ ಪಂಪ್ಗಳ ಮೂಲಕ ಗಂಟೆಗೆ ಸಾವಿರಾರು ಘನ ಮೀಟರ್ಗಳಷ್ಟು ನೀರನ್ನು ಚಿಮ್ಮಿಸಬಹುದು. ಕನಿಷ್ಠ ಒಂದೇ ವಾರದಲ್ಲಿ ಸುರಂಗಗಳಲ್ಲಿ ನೀರು ತುಂಬಿಕೊಂಡು ಪ್ರವಾಹ ಸೃಷ್ಟಿಬಹುದು ಅನ್ನೋದು ಇಸ್ರೇಲ್ನ ಮಾಸ್ಟರ್ ಪ್ಲ್ಯಾನ್.
ಹಿಂದೂಸ್ತಾನ್ ಸಮಾಚಾರ್
