
ಬೀಜಿಂಗ್, 3 ಡಿಸೆಂಬರ್(ಹಿ.ಸ):
ಆ್ಯಂಕರ್ :
: ಚೀನಾದಲ್ಲಿ ಇತ್ತೀಚೆಗೆ ಮಕ್ಕಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ನ್ಯುಮೋನಿಯಾ ರೀತಿಯ ಉಸಿರಾಟ ಖಾಯಿಲೆಗಳು ಗೊತ್ತಿರುವ ರೋಗಕಾರಕಗಳಿಂದಲೇ ಹರಡುತ್ತಿದ್ದು, ಅದು ಪ್ರಸರಣ ಸೋಂಕು ಅಲ್ಲ ಎಂದು ಚೀನಿ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಅಧಿಕಾರಿ ಮಿ ಫೆಂಗ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಈ ಸಂಬಂಧ ನಾವು ಹೆಚ್ಚುವರಿ ಚಿಕಿತ್ಸಾಲಯಗಳನ್ನು ತೆರೆದು ಮಕ್ಕಳು ಹಾಗೂ ಹಿರಿಯನಾಗರಿಕರಿಗೆ ಶೀಘ್ರವಾಗಿ ರೋಗನಿರೋಧಕ ಲಸಿಕೆಯನ್ನು ನೀಡುವ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಯೋಜಿಸಿದ್ದು, ಎಲ್ಲರೂ ಮಾಸ್ಕ್ ಧರಿಸಿ ಆಗಾಗ ತಮ್ಮ ಕೈ ತೊಳೆಯುವಂತೆ ಸೂಚಿಸುತ್ತೇವೆ’ ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್
