ನವದೆಹಲಿ,18ನವೆಂಬರ್ (ಹಿ.ಸ):
ಆ್ಯಂಕರ್ :
ನಿಷ್ಕ್ರಿಯವಾಗಿರುವ ಯುಪಿಐ ಬಳಕೆದಾರರಿಗೆ ಎಚ್ಚರಿಕೆಯ ಕರೆಗಂಟೆ ಈ ಸುದ್ದಿ. ಕಳೆದ ಒಂದು ವರ್ಷದಿಂದ ಯಾವುದೇ ವಹಿವಾಟು ನಡೆಸದ ಯುಪಿಐ ಐಡಿ, ಯುಪಿಐ ನಂಬರ್ ಮತ್ತು ಫೋನ್ ನಂಬರ್ಗಳನ್ನು ಡೀ ಆ್ಯಕ್ಟಿವೇಟ್ ಮಾಡುವ ಸಂಬಂಧ ಎನ್ಪಿಸಿಐ ಮಾರ್ಗಸೂಚಿ ಹೊರಡಿಸಿದೆ. ಟಿಪಿಎಪಿ ಅಥವಾ ಪಿಎಸ್ಪಿ ಅಪ್ಲಿಕೇಶನ್ಗಳಿಂದ ಹಣಕಾಸು ವಹಿವಾಟನ್ನಾಗಲೀ ಅಥವಾ ಬ್ಯಾಲನ್ಸ್ ಎನ್ಕ್ವೈರಿ ಇತ್ಯಾದಿ ಹಣಕಾಸೇತರ ವಹಿವಾಟನ್ನಾಗಲೀ ಮಾಡದೇ ಇದ್ದರೆ ಡೀ ಆಕ್ಟಿವೇಟ್ ಆಗುವ ಸಾಧ್ಯತೆ ಇರುತ್ತದೆ. ನಿಷ್ಕ್ರಿಯ ಗ್ರಾಹಕರ ಯುಪಿಐ ಐಡಿಗಳನ್ನು ಡೀಆ್ಯಕ್ಟಿವೇಟ್ ಮಾಡಲು 2023ರ ಡಿಸೆಂಬರ್ 31ಕ್ಕೆ ಡೆಡ್ಲೈನ್ ಹಾಕಲಾಗಿದೆ.
ಟಿಪಿಎಪಿ, ಅಥವಾ ಥರ್ಡ್ ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ಗಳೆಂದರೆ ಫೋನ್ ಪೇ, ಪೇಟಿಎಂ, ಗೂಗಲ್ ಪೇ ಇತ್ಯಾದಿಯವರು. ಇನ್ನು, ಪಿಎಸ್ಪಿ ಎಂದರೆ ಪೇಮೆಂಟ್ ಸರ್ವಿಸ್ ಪ್ರೊವೈಡರ್ಗಳಾಗಿವೆ. ಪೇಮೆಂಟ್ ಒದಗಿಸುವ ಬ್ಯಾಂಕ್ ಇತ್ಯಾದಿಗಳು ಪಿಎಸ್ಪಿಗಳಾಗಿವೆ.
ಹಿಂದೂಸ್ತಾನ್ ಸಮಾಚಾರ್
