ಹೈದಾರಾಬಾದ್,18ನವೆಂಬರ್ (ಹಿ.ಸ):
ಆ್ಯಂಕರ್ :ತಮಿಳಿನಲ್ಲಿ ಕಮಲ್ ಹಾಸನ್ ರ ‘ವಿಕ್ರಂ’, ರಜನೀಕಾಂತ್ರ ‘ಜೈಲರ್’, ಕನ್ನಡದಲ್ಲಿ ಶಿವಣ್ಣನ ಸಿನಿಮಾ ‘ಘೋಸ್ಟ್’, ತೆಲುಗಿನಲ್ಲಿ ಬಾಲಕೃಷ್ಣದ ‘ಭಗವಂತ್ ಕೇಸರಿ’ ಎಲ್ಲವೂ ಸೂಪರ್ ಹಿಟ್ ಆಗಿವೆ. ಗಮನಸಿಬೇಕಾದದ್ದೆಂದರೆ ಆಯಾ ಚಿತ್ರರಂಗದ ಹಿರಿಯ ನಟರು ಸೂಪರ್-ಡೂಪರ್ ಹಿಟ್ಗಳನ್ನು ನೀಡುತ್ತಿದ್ದಾರೆ. ಆದರೆ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಮಾತ್ರ ಕಳೆದ ಕೆಲವು ವರ್ಷಗಳಿಂದಲೂ ಒಂದೇ-ಒಂದು ಸರಿಯಾದ ಹಿಟ್ ಸಿನಿಮಾ ಕೊಡಲು ಸಾಧ್ಯವಾಗಿಲ್ಲ.
ಅದೇ ಮಾಸ್-ಮಸಾಲಾ ಸಿನಿಮಾಗಳು, ರೀಮೇಕ್ಗಳನ್ನು ನಂಬಿ ಒಂದರ ಹಿಂದೊಂದು ಫ್ಲಾಪ್ಗಳನ್ನೇ ಕಳೆದ ಕೆಲವು ವರ್ಷಗಳಿಂದಲೂ ನೀಡುತ್ತಾ ಬಂದಿದ್ದಾರೆ ಮೆಗಾಸ್ಟಾರ್ ಚಿರಂಜೀವಿ. ಮೆಗಾಸ್ಟಾರ್ ನಟಿಸಿದ್ದ ಈ ಹಿಂದಿನ ಸಿನಿಮಾ ‘ಭೋಲಾ ಶಂಕರ್’ ಬಾಕ್ಸ್ ಆಫೀಸ್ನಲ್ಲಿ ಇನ್ನಿಲ್ಲದಂತೆ ಸೋಲು ಕಂಡಿತು. ಅದರ ಹಿಂದೆ ಬಿಡುಗಡೆ ಆಗಿದ್ದ ‘ವಾಲ್ತೇರು ವೀರಯ್ಯ’, ‘ಗಾಡ್ ಫಾದರ್’, ‘ಆಚಾರ್ಯ’ ಸಿನಿಮಾಗಳು ಸಹ ಸೋಲು ಕಂಡಿದ್ದವು.
ಸತತ ಸೋಲುಗಳಿಂದ ಕಂಗೆಟ್ಟಿದ್ದ ಮೆಗಾಸ್ಟಾರ್ ಚಿರಂಜೀವಿ ಈಗ ಬುದ್ಧಿಕಲಿತಂತಿದ್ದು, ಸಿನಿಮಾ ಆಯ್ಕೆ ವಿಧಾನವನ್ನು ಬದಲು ಮಾಡಿಕೊಂಡಿದ್ದಾರೆ. ಅದೇ ಹಳೆ ಮಾದರಿ ಕಮರ್ಶಿಯಲ್, ಮಾಸ್ ಮಸಾಲಾ ಸಿನಿಮಾ ಅಥವಾ ರೀಮೇಕ್ ಸಿನಿಮಾದ ಬದಲಿಗೆ ಹೊಸ ಕತೆಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಚಿರಂಜೀವಿ ತಮ್ಮ 156ನೇ ಸಿನಿಮಾಕ್ಕೆ ಭಿನ್ನ ಕತೆಯನ್ನು ಆಯ್ದುಕೊಂಡಿದ್ದು, ಈ ಸಿನಿಮಾದಲ್ಲಿ ದಿಗ್ಗಜರ ಸಮಾಗಮ ಆಗುತ್ತಿರುವುದು ವಿಶೇಷ.
ಹಿಂದೂಸ್ತಾನ್ ಸಮಾಚಾರ್
