ದೆಹಲಿ , 16ನವೆಂಬರ್ (ಹಿ.ಸ):
ಆ್ಯಂಕರ್ :ಭಾರತ ನಾಳೆ ವರ್ಚುವಲ್ ಮಾದರಿಯಲ್ಲಿ ಎರಡನೇ ವಾಯ್ಸ್ ಆಫ್ ಗ್ಲೋಬಲ್ ಸೌತ್ ಸಮ್ಮಿತ್ಗೆ ಅತಿಥ್ಯ ವಹಿಸಲು ಸಜ್ಜಾಗಿದೆ. ಭಾರತದ ಜಿ-೨೦ ಅಧ್ಯಕ್ಷತೆಯ ಅವಧಿಯಲ್ಲಿ ಜಾಗತಿಕ ದಕ್ಷಿಣದ ದೇಶಗಳೊಂದಿಗೆ ನಡೆಸಲಾದ ವಿವಿಧ ಜಿ-೨೦ ಸಭೆಗಳಲ್ಲಿ ಸಾಧಿಸಲಾದ ಪ್ರಮುಖ ಫಲಿತಾಂಶಗಳನ್ನು ಹಂಚಿಕೊಳ್ಳುವ ಕುರಿತು ಈ ಶೃಂಗಸಭೆ ಗಮನ ಹರಿಸಲಿದೆ. ಜಾಗತಿಕ ಅಭಿವೃದ್ಧಿಗಳಿಗೆ ಸಂಬಂಧಿಸಿದಂತೆ ಎದುರಿಸಲಾದ ಸವಾಲುಗಳ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ. ಸೇರ್ಪಡೆ, ಪ್ರಾತಿನಿಧಿತ್ವ, ಪ್ರಗತಿಯ ಸಾಮಾನ್ಯ ಆಕಾಂಕ್ಷೆಗಳ ನಿಟ್ಟಿನಲ್ಲಿ ಸುಸ್ಥಿರ ಚಲನೆಯ ವಿಧಾನಗಳನ್ನು ಚರ್ಚಿಸಲು ಇದು ವೇದಿಕೆಯಾಗಿ ಕಾರ್ಯ ನಿರ್ವಹಿಸಲಿದೆ. ಶೃಂಗಸಭೆಯಲ್ಲಿ ೧೦ ಸೆಷನ್ಗಳು ನಡೆಯಲಿವೆ. ಆರಂಭಿಕ ಮತ್ತು ಸಮಾರೋಪ ಸೆಷನ್ಗಳು ಸರ್ಕಾರದ ಮಟ್ಟದಲ್ಲಿ ನಡೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಸೆಷನ್ಗಳ ಅತಿಥ್ಯ ವಹಿಸಲಿದ್ದಾರೆ. ಆರಂಭಿಕ ನಾಯಕರ ಸೆಷನ್ನ ಘೋಷವಾಕ್ಯ ’ಪ್ರತಿಯೊಬ್ಬರ ಅಭಿವೃದ್ಧಿಗಾಗಿ, ಪ್ರತಿಯೊಬ್ಬರ ನಂಬಿಕೆಯೊಂದಿಗೆ ಒಗ್ಗಟ್ಟಾಗಿ’ ಎಂಬುದಾಗಿದ್ದು, ಸಮಾರೋಪ ಸೆಷನ್ನ ಘೋಷವಾಕ್ಯ ಗ್ಲೊಬಲ್ ಸೌತ್-ಒಂದು ಭವಿಷ್ಯಕ್ಕಾಗಿ ಒಗ್ಗಟ್ಟು ಎಂಬುದಾಗಿದೆ. ವಾಯ್ಸ್ ಆಫ್ ಗ್ಲೋಬಲ್ ಸೌತ್ ಸಮ್ಮಿತ್ನ ವರ್ಚುವಲ್ ಮಾದರಿಯ ಮೊದಲ ಆವೃತ್ತಿಗೆ ಈ ವರ್ಷ ಜನವರಿಯಲ್ಲಿ ಭಾರತ ಅತಿಥ್ಯ ವಹಿಸಿತ್ತು.
ಹಿಂದೂಸ್ತಾನ್ ಸಮಾಚಾರ್
