
ನವದೆಹಲಿ,7 ನವೆಂಬರ್ (ಹಿ.ಸ):
ಆ್ಯಂಕರ್ :೫೪ನೇ ಭಾರತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಗೋವಾದಲ್ಲಿ ಈ ತಿಂಗಳ ೨೦ ರಿಂದ ಆರಂಭವಾಗಲಿದ್ದು, ೨೮ರವರೆಗೆ ನಡೆಯಲಿದೆ.
ದೆಹಲಿಯಲ್ಲಿ ನಿನ್ನೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಜಾಗತಿಕ ಚಲನಚಿತ್ರಗಳಿಗೆ ಈ ಚಿತ್ರೋತ್ಸವ ಪ್ರಮುಖ ವೇದಿಕೆಯಾಗಲಿದ್ದು, ವಿಶ್ವದ ಅತಿ ದೊಡ್ಡ ಸಾಂಸ್ಕೃತಿಕ ಉತ್ಸವದಲ್ಲಿ ಒಂದಾಗಲಿದೆ. ದೇಶ ಮತ್ತು ವಿಶ್ವಾದ್ಯಂತ ಅತ್ಯುತ್ತಮ ಪ್ರತಿಭೆಗಳನ್ನು ಒಗ್ಗೂಡಿಸಲಿದೆ ಎಂದು ಹೇಳಿದರು. ಅಂತಾರಾಷ್ಟ್ರೀಯ ತೀರ್ಪುಗಾರರ ಸಮಿತಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಆಯ್ಕೆ ಮಾಡಲಿದ್ದು, ಇದರಲ್ಲಿ ಗೋಲ್ಡನ್ ಪೀಕಾಕ್ ಪ್ರಶಸ್ತಿಯೂ ಸೇರಿದೆ.
ಹಿಂದೂಸ್ತಾನ್ ಸಮಾಚಾರ್
