
ದೆಹಲಿ , 3 ನವೆಂಬರ್ (ಹಿ.ಸ):
ಆ್ಯಂಕರ್ :
ಪ್ರಸ್ತುತ ನಡೆಯುತ್ತಿರುವ ದೀಪಾವಳಿ ಹಾಗೂ ಚಾಥ್ ಹಬ್ಬಗಳ ಋತುವಿನಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆ ಮಾಡಲು ರೈಲ್ವೆ ೧೧೫ ವಿಶೇಷ ರೈಲುಗಳನ್ನು ಓಡಿಸಲಿದೆ. ದೆಹಲಿ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸುಖ್ವಿಂದರ್ ಸಿಂಗ್, ಹಬ್ಬಗಳ ಅಂಗವಾಗಿ ೬೧ ವಿಶೇಷ ರೈಲುಗಳನ್ನು ಈಗ ಓಡಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಇನ್ನು ೫೫ ರೈಲುಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಕಾರ್ಯಾಚರಣೆಗೆ ಇಳಿಸಲಾಗುವುದು ಎಂದು ಹೇಳಿದರು. ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿಯಾಗಿ ೪೭, ಆನಂದ್ ವಿಹಾರ್ ನಿಲ್ದಾಣದಲ್ಲಿ ೪೫ ಬುಕಿಂಗ್ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಪ್ರಕಟಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
