ಮುಂಬೈ, 2 ನವೆಂಬರ್ (ಹಿ.ಸ):
ಆ್ಯಂಕರ್ :
ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಇಂದು (ನವೆಂಬರ್ 2) ಜನ್ಮದಿನ. ಅವರು 58ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಈ ವರ್ಷ ಬ್ಯಾಕ್ ಟು ಬ್ಯಾಕ್ ಗೆಲುವು ಸಿಕ್ಕಿರುವುದರಿಂದ ಖುಷಿ ಆಗಿದೆ. ಹೀಗಾಗಿ, ಸೆಲೆಬ್ರಿಟಿಗಳಿಗಾಗಿ ಭರ್ಜರಿ ಪಾರ್ಟಿ ಕೂಡ ಆಯೋಜನೆ ಮಾಡಿದ್ದಾರೆ. ಶಾರುಖ್ ಖಾನ್ ಮನೆ ಮುಂದೆ ಅಭಿಮಾನಿಗಳ ದಂಡು ನೆರೆದಿದೆ. ಮಧ್ಯರಾತ್ರಿ ಅವರು ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ .
ಶಾರುಖ್ ಖಾನ್ ಅವರು ಮುಂಬೈನಲ್ಲಿ ಮನೆ ಹೊಂದಿದ್ದಾರೆ. ಇದಕ್ಕೆ ಮನ್ನತ್ ಎಂದು ಹೆಸರು ಇಟ್ಟಿದ್ದಾರೆ. ಮನ್ನತ್ ಎದುರು ಅಭಿಮಾನಿಗಳ ದಂಡು ನೆರೆದಿದೆ. ಮಧ್ಯರಾತ್ರಿಯಿಂದಲೇ ಶಾರುಖ್ ಖಾನ್ ಫ್ಯಾನ್ಸ್ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ‘ಹ್ಯಾಪಿ ಬರ್ತ್ಡೇ ಎಸ್ಆರ್ಕೆ’ ಎಂಬಿತ್ಯಾದಿ ಬೋರ್ಡ್ಗಳನ್ನು ಇಟ್ಟುಕೊಂಡು ಅಭಿಮಾನಿಗಳು ನಿಂತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
