
ಕೋಲ್ಕತ್ತಾ, 31ಅಕ್ಟೋಬರ್ (ಹಿ.ಸ):
ಆ್ಯಂಕರ್ :ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಇಂದು 31ನೇ ಪಂದ್ಯ ನಡೆಯಲಿದ್ದು, ಬಾಬರ್ ಅಝಂ ನಾಯಕತ್ವದ ಪಾಕಿಸ್ತಾನ ಹಾಗೂ ಶಕಿಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ ಮುಖಾಮುಖಿ ಆಗಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಸೆಮಿ ಫೈನಲ್ಗೇರಲು ಕೂದಲೆಳೆಯಷ್ಟು ಅವಕಾಶ ಹೊಂದಿರುವ ಬಾಬರ್ ಪಡೆಗೆ ಈ ಪಂದ್ಯ ಮಹತ್ವದ್ದಾಗಿದೆ. ಪಾಕಿಸ್ತಾನ ಇಂದು ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಅತ್ತ ಬಾಂಗ್ಲಾದೇಶ ಈಗಾಗಲೇ ಟೂರ್ನಿಯಿಂದ ಔಟ್ ಆಗಿದೆ.
ಪಾಕಿಸ್ತಾನ ತಂಡ ಆಡಿರುವ ಆರು ಪಂದ್ಯಗಳ ಪೈಕಿ ಆರಂಭದ ಎರಡು ಪಂದ್ಯಗಳನ್ನು ಗೆದ್ದಿದ್ದು ಬಿಟ್ಟರೆ ನಂತರದ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. 4 ಅಂಕದೊಂದಿಗೆ ಪಾಯಿಂಟ್ ಟೇಬಲ್ನಲ್ಲಿ ಏಳನೇ ಸ್ಥಾನದಲ್ಲಿದೆ. ರನ್ರೇಟ್ ಕೂಡ ಮೈನಸ್ನಲ್ಲಿದೆ. ಹೀಗಾಗಿ ಪಾಕ್ ಸೆಮಿ ಫೈನಲ್ ಆಸೆ ಜೀವಂತವಾಗಿರಿಸಲು ದೊಡ್ಡ ಅಂತರದ ಗೆಲುವು ಬೇಕು. ಜೊತೆಗೆ ಇತರೆ ತಂಡಗಳ ಫಲಿತಾಂಶ ಕೂಡ ಮಹತ್ವದ ಪಾತ್ರವಹಿಸಲಿದೆ.
ಹಿಂದೂಸ್ತಾನ್ ಸಮಾಚಾರ್
