ರಾಯಚೂರು,, 27 ಅಕ್ಟೋಬರ್ (ಹಿ.ಸ):
ಆ್ಯಂಕರ್: ಅರ್ಹತಾ ದಿನಾಂಕ 01-01-2024ಕ್ಕೆ ಸಂಬಂಧಿಸಿದಂತೆ ಮತದಾರರ ವಿಶೇಷ ನೊಂದಣಿ ಅಭಿಯಾನದನ್ವಯ ನಿಯಮಿತವಾಗಿರುವ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿದ್ದು, ಚುನಾವಣಾ ಆಯೋಗದಿಂದ ಪರಿಷ್ಕರಣೆ ಮಾಡಿದ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಎಂದು ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್ ದುರುಗೇಶ ಅವರು ಹೇಳಿದ್ದಾರೆ.
ಅವರು ಅ.27ರ(ಶುಕ್ರವಾರ) ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿ ಮಾತನಾಡಿ, 01-01-2024 ಅರ್ಹತಾ ದಿನಾಂಕಕ್ಕೆ ಮತದಾರರ ವಿಶೇಷ ನೊಂದಣಿ ಅಭಿಯಾನದಲ್ಲಿ ಒಟ್ಟು 16,46,432 ಮತದಾರರು ಜಿಲ್ಲೆಯಲ್ಲಿದ್ದು, ಇದರಲ್ಲಿ ಒಟ್ಟು 8,11,052 ಪುರುಷ ಮತದಾರರು, 8,35,120 ಮಹಳಾ ಮತದಾರರು ಹಾಗೂ 260 ಲಿಂಗತ್ವ ಅಲ್ಪಸಂಖ್ಯಾತ ಮತದಾರರಿಗದ್ದಾರೆ ಎಂದು ತಿಳಿಸಿದರು.
2024ನೇ ಸಾಲಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ 2,30,746 ಮತದಾರರು, ರಾಯಚೂರು ನಗರ ಕ್ಷೇತ್ರದಲ್ಲಿ 2,36,498, ಮಾನವಿ ಕ್ಷೇತ್ರದಲ್ಲಿ 2,35,863, ದೇವದುರ್ಗ ಕ್ಷೇತ್ರದಲ್ಲಿ 2,34,402 ಮತದಾರರಿದ್ದು, ಲಿಂಗಸುಗೂರು 257693, ಸಿಂಧನೂರು 2,40,852 ಹಾಗೂ ಮಸ್ಕಿ ಕ್ಷೇತ್ರದಲ್ಲಿ 2,10,678 ಮತದಾರರಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ 7 ವಿಧಾನ ಕ್ಷೇತ್ರಗಳಲ್ಲಿ 18-19 ವಯಸ್ಸಿನ 40453 ಮತದಾರರಿದ್ದು, 20-29 ವಯಸ್ಸಿನ 382635, 30-39 ವಯಸ್ಸಿನ 454348, 40-49 ವಯಸ್ಸಿನ 108367, 50-59 ವಯಸ್ಸಿನ 227091, 60-69 ವಯಸ್ಸಿನ 139249, 70-79 ವಯಸ್ಸಿನ 67355, 80-89 ವಯಸ್ಸಿನ 199711, 90-99 ವಯಸ್ಸಿನ 3819, 100-109 ವಯಸ್ಸಿನ 336, ಹಾಗೂ 120ಕ್ಕಿಂತ ಹೆಚ್ಚಿನ ವಯಸ್ಸಿನ 3 ಮತದಾರರು ಜಿಲ್ಲೆಯಲ್ಲಿದ್ದಾರ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 1840 ಮತದಾನ ಕೇಂದ್ರಗಳು ಭಾರತ ಚುನಾವಣಾ ಆಯೋಗದಿಂದ ಅನುಮೋದನೆ ಪಡೆದಿದ್ದು, ಹೆಚ್ಚುವರಿಯಾಗಿ 13 ಮತದಾನ ಕೇಂದ್ರಗಳನ್ನು ಸ್ಥಾಪಿಸಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1853 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು. ಇದೇ ವೇಳೆ ಪರಿಷ್ಕøತ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಮುಖಂಡರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳಾದ ರಿಷಿಕೇಶ, ರಮೇಶ, ವಿವಿಧ ರಾಜಕೀಯ ಪಕ್ಷದ ಮುಖಂಡರಾದ ಕೆ.ತಿರುಮಲ ರಡ್ಡಿ, ರವಿಕುಮಾರ, ವಿ.ಎಸ್ ಯಲ್ಲಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
