ನವದೆಹಲಿ,26ಅಕ್ಟೋಬರ್ (ಹಿ.ಸ):
ಆ್ಯಂಕರ್ :ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ನವದೆಹಲಿಯಲ್ಲಿಂದು ಭಾರತೀಯ ಬೀಜ ಸಹಕಾರಿ ಸಮಿತಿ ಲಿಮಿಟೆಡ್ ಆಯೋಜಿಸಿರುವ “ಸಹಕಾರಿ ಕ್ಷೇತ್ರದ ಮೂಲಕ ಸುಧಾರಿತ ಮತ್ತು ಸಾಂಪ್ರದಾಯಿಕ ಬೀಜಗಳ ಉತ್ಪಾದನೆ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅಲ್ಲದೆ ಅವರು ಲಾಂಛನ, ವೆಬ್ಸೈಟ್ ಮತ್ತು ಕೈಪಿಡಿ ಅನಾವರಣಗೊಳಿಸುವರು ಮತ್ತು ಬಿಬಿಎಸ್ಎಸ್ಎಲ್ ಸದಸ್ಯರಿಗೆ ಸದಸ್ಯತ್ವ ಪ್ರಮಾಣಪತ್ರಗಳನ್ನು ವಿತರಿಸುವರು. ವಿಚಾರ ಸಂಕಿರಣದಲ್ಲಿ, ಬಿಬಿಎಸ್ಎಸ್ಎಲ್ ಉದ್ದೇಶಗಳು, ಪಿಎಸಿಎಸ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಬೀಜ ಉತ್ಪಾದನೆಯ ಪ್ರಾಮುಖ್ಯತೆ ಮತ್ತು ಉತ್ಪಾದಕತೆ ಮತ್ತು ಬೆಳೆಗಳ ಪೋಷಣೆಯಲ್ಲಿ ಬೀಜಗಳ ಪಾತ್ರ, ಜೊತೆಗೆ ಸಣ್ಣ ಮತ್ತು ಅತಿ ಸಣ್ಣ ರೈತರ ಏಳಿಗೆಯಲ್ಲಿ ಸಹಕಾರ ಸಂಘಗಳ ಪಾತ್ರದ ಕುರಿತು ಚರ್ಚೆ ನಡೆಸಲಾಗುವುದು. ಸಹಕಾರಿ ಕ್ಷೇತ್ರದ ಮೂಲಕ ಸಂಸ್ಕರಣೆ ಮತ್ತು ಮಾರುಕಟ್ಟೆ ಜೊತೆಗೆ ಸುಧಾರಿತ ಮತ್ತು ಸಾಂಪ್ರದಾಯಿಕ ಬೀಜ ಸಂಶೋಧನೆ ಮತ್ತು ಉತ್ಪಾದನೆಗೆ ಒಂದು ಸಮಗ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ರಾಷ್ಟ್ರ ಮಟ್ಟದ ಬಹು-ರಾಜ್ಯ ಸಹಕಾರ ಸಂಘ ಸ್ಥಾಪಿಸುವ ಅಗತ್ಯತೆ ಮನಗಂಡು ಬಿಬಿಎಸ್ಎಸ್ಎಲ್ ಸ್ಥಾಪನೆಯಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ”ಸಹಕಾರದಿಂದ ಸಮೃದ್ಧಿ” ದೂರದೃಷ್ಟಿಯ ಸಾಕಾರ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದ್ದು, ನಿಗಮದ ಮೂಲಕ ಗುಣಮಟ್ಟದ ಬೀಜ ಉತ್ಪಾದನೆ ಮತ್ತು ವಿತರಣೆ, ದೇಶದಲ್ಲಿ ಕೃಷಿ ಉತ್ಪಾದನೆ ಹೆಚ್ಚಿಸುತ್ತದೆ.
ಹಿಂದೂಸ್ತಾನ್ ಸಮಾಚಾರ್
