ಮೈಸೂರು, 25ಅಕ್ಟೋಬರ್ (ಹಿ.ಸ):
ಆ್ಯಂಕರ್ :
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆ ಪ್ರವಾಸದಲ್ಲಿದ್ದು ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 12.30ಕ್ಕೆ ರಾಮಕೃಷ್ಣ ನಗರದ ಲಿಂಗಾಬುದಿ ಕೆರೆಯ ಸಸ್ಯಶಾಸ್ತ್ರೀಯ ತೋಟವನ್ನು ಉದ್ಘಾಟನೆ ಮಾಡಲಿದ್ದಾರೆ. ನಂತರ ತೋಟಗಾರಿಕೆ ಪಿತಾಮಹ ಡಾ.ಎಮ್ .ಹೆಚ್. ಮರೀಗೌಡ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಬಳಿಕ ಕರ್ಜನ್ ಪಾರ್ಕ್ನಲ್ಲಿರುವ ಮರೀಗೌಡ ಪ್ರತಿಮೆ ನಂತರ ವರಸಿದ್ಧಿ ವಿನಾಯಕ ಹೆಲ್ತ್ಕೇರ್ನ ಆರ್ಯ ಆಸ್ಪತ್ರೆ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಚಾಮರಾಜಪುರಂದಲ್ಲಿರುವ ಆರ್ಯ ಆಸ್ಪತ್ರೆ ಉದ್ಘಟಿಸಲಿದ್ದಾರೆ. ಸಂಜೆ 4 ಗಂಟೆಗೆ ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
