
ನವದೆಹಲಿ,23ಅಕ್ಟೋಬರ್ (ಹಿ.ಸ):
ಆ್ಯಂಕರ್ :ಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭಾರತದ ‘ಭವಿಷ್ಯದ ಪ್ರಧಾನ ಮಂತ್ರಿ’ ಎಂದು ಘೋಷಿಸುವ ಹೋರ್ಡಿಂಗ್ ಪಕ್ಷದ ಲಕ್ನೋ ಕಚೇರಿಯ ಹೊರಗೆ ಕಾಣಿಸಿಕೊಂಡಿದ್ದು, ವಿರೋಧ ಪಕ್ಷಗಳ ಮೈತ್ರಿಕೂಟಗಳ ನಡುವೆ ಬಿಕ್ಕಟ್ಟು ಇದೆಯೇ ಎಂಬ ಸಂದೇಹ ಹುಟ್ಟು ಹಾಕಿದೆ. ಇಂಡಿಯಾ ಮೈತ್ರಿಕೂಟದ ಪ್ರಮುಖ ಸದಸ್ಯರಾದ ಕಾಂಗ್ರೆಸ್ ಮತ್ತು ಎಸ್ಪಿ ನಡುವೆ ಎಲ್ಲವೂ ಸರಿ ಇಲ್ಲ ಎಂಬುದನ್ನು ಇದು ತೋರಿಸುತ್ತಿದೆ. ಈ ಪೋಸ್ಟರ್ ಅನ್ನು ಪಕ್ಷದ ವಕ್ತಾರ ಫಕ್ರುಲ್ ಹಸನ್ ‘ಚಾಂದ್’ ಹಾಕಿದ್ದಾರೆ.
ಪಕ್ಷದ ಕಚೇರಿಯ ಹೊರಗೆ ಈ ರೀತಿಯ ಪೋಸ್ಟರ್ ಹಾಕುವ ಹಿಂದಿನ ಉದ್ದೇಶದ ಬಗ್ಗೆ ಕೇಳಿದಾಗ, ಫಕ್ರುಲ್ ಹಸನ್ ‘ಚಾಂದ್’ ಅವರು, “ಅಖಿಲೇಶ್ ಯಾದವ್ ಅವರ ಜನ್ಮದಿನ ಜುಲೈ 1 ರಂದು, ಆದರೆ ತಮ್ಮ ನಾಯಕನ ಮೇಲಿನ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸಲು, ಸಮಾಜವಾದಿ ಪಕ್ಷದ ಕಾರ್ಯಕರ್ತರು ಅವರ ಜನ್ಮದಿನವನ್ನು ಅನೇಕ ಬಾರಿ ಆಚರಿಸುತ್ತಾರೆ. ಇಂದು ಪಕ್ಷದ ಕೆಲವು ಮುಖಂಡರು ಮತ್ತು ಕಾರ್ಯಕರ್ತರು ಅವರ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಅಖಿಲೇಶ್ ಯಾದವ್ ದೇಶದ ಪ್ರಧಾನಿಯಾಗಲಿ ಮತ್ತು ಜನರ ಸೇವೆ ಮಾಡಲಿ ಎಂದು ಪ್ರಾರ್ಥಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಪೋಸ್ಟರ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಮತ್ತು ಉತ್ತರ ಪ್ರದೇಶ ಸರ್ಕಾರದ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ, ಹಗಲುಗನಸು ಕಾಣುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
